ಲಕ್ನೋ: ಮೂರೂವರೆ ವರ್ಷದ ವಿದ್ಯಾರ್ಥಿನಿಯ ಮೇಲೆ ಶಾಲೆಯ ಬಸ್ ಚಾಲಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಚಾಲಕನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಶಾಲೆಯ ಆಡಳಿತ ಮಂಡಳಿ ಅಮಾನವೀಯತೆ ಮೆರೆದಿದೆ.
ಏನಿದು ಪ್ರಕರಣ?:
ಸಂತ್ರಸ್ತ ಬಾಲಕಿ ನೋಯಿಡಾದ ಖಾಸಗಿ ಶಿಶುವಿಹಾರಕ್ಕೆ ಬಸ್‍ನಲ್ಲಿ ಹೋಗುತ್ತಿದ್ದಳು. ಎಂದಿನಂತೆ ಅಕ್ಟೋಬರ್ 9ರಂದು ಬಾಲಕಿ ಬಸ್‍ನಲ್ಲಿ ಮನೆಗೆ ಮರಳುತ್ತಿದ್ದಾಗ ಚಾಲಕ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಗಾಬರಿಗೊಂಡಿದ್ದ ಬಾಲಕಿ ಬಸ್‍ನಿಂದ ಇಳಿದು, ಅಳುತ್ತಲೇ ತಂದೆಯನ್ನು ಸೇರಿಕೊಂಡಿದ್ದಾಳೆ ಎಂದು ಸಂತ್ರಸ್ತ ಬಾಲಕಿ ತಾಯಿ ಹೇಳಿದ್ದಾರೆ.
Advertisement
ಮಗಳನ್ನು ಸಂತೈಸಿ ಕೇಳಿದಾಗ, ಚಾಲಕ ಎಸಗಿದ ಕೃತ್ಯ ವಿವರಿಸಿದ್ದಾಳೆ. ಅಷ್ಟೇ ಅಲ್ಲದೆ ಆತನು ವಿಡಿಯೋ ಮಾಡಿಕೊಂಡು, ಯಾರಿಗೂ ಹೇಳಬೇಡ ಅಂತಾ ಎಚ್ಚರಿಕೆ ನೀಡಿ, ಹಲ್ಲೆ ಮಾಡಿದ್ದಾನೆಂದು ಮಗಳು ಕಣ್ಣಿರಿಟ್ಟಿದ್ದಾಳೆ ಎಂದು ಸಂತ್ರಸ್ತ ಬಾಲಕಿ ಪೋಷಕರು ದೂರಿದ್ದಾರೆ.
Advertisement
Advertisement
ಈ ಸಂಬಂಧ ಚಾಲಕನ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಶಾಲೆಯ ಆಡಳಿತ ಮಂಡಳಿಗೆ ದೂರು ದಾಖಲಾಗಿತ್ತು. ಆದರೆ ಅವರು ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಳ್ಳಲಿಲ್ಲ. ಹೀಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತ ಬಾಲಕಿ ಕುಟುಂಬಸ್ಥರು ಗುರುವಾರ ದೂರು ನೀಡಿದ್ದಾರೆ ಎಂದು ಗೌತಮ್ ಬುದ್ಧನಗರ ಗ್ರಾಮಾಂತರ ಪೊಲೀಸ್ ಅಧೀಕ್ಷಕ ವಿನೀತ್ ಜೈಸ್ವಾಲ್ ತಿಳಿಸಿದ್ದಾರೆ.
Advertisement
ಈ ಸಂಬಂಧ ಚಾಲಕನ ವಿರುದ್ಧ ಪೊಕ್ಸೋ ಕಾಯ್ದೆ ಅಡಿ ಸುರಜ್‍ಪುರ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಬಾಲಕಿಯನ್ನು ಶುಕ್ರವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಇತ್ತ ಆರೋಪಿ ಚಾಲಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv