ರೈಲ್ವೆ ನಿಲ್ದಾಣದಲ್ಲಿ ಮೂರು ವರ್ಷದ ಬಾಲಕಿ ಮೇಲೆ ರೇಪ್

Public TV
1 Min Read
Maharashtra Railway Station

ಮುಂಬೈ: ಮೂರು ವರ್ಷದ ಬಾಲಕಿಯ (Girl) ಮೇಲೆ ಚಿಂದಿ ಆಯುವವನೊಬ್ಬ ಅತ್ಯಾಚಾರವೆಸಗಿದ ಘಟನೆ ಮಹಾರಾಷ್ಟ್ರದ (Maharashtra) ನವಿ ಮುಂಬೈನಲ್ಲಿ ನಡೆದಿದೆ.

ಪನ್ವೇಲ್ ರೈಲು ನಿಲ್ದಾಣದಲ್ಲಿ (Railway Station) ತಾಯಿಯೊಂದಿಗೆ 3 ವರ್ಷದ ಬಾಲಕಿ ಮಲಗಿತ್ತು. ಈ ವೇಳೆ ಚಿಂದಿ ಆಯುವವನು ಬಾಲಕಿಯನ್ನು ಎತ್ತಿಕೊಂಡು ಪಕ್ಕಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಅವನು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ದೂರದಲ್ಲಿ ಮಗು ಅಳುತ್ತಿರುವುದನ್ನು ತಾಯಿ ಕೇಳಿಸಿಕೊಂಡಿದ್ದಾಳೆ. ಅದಾದ ಬಳಿಕ ಬಾಲಕಿಯನ್ನು ಹುಡುಕುತ್ತಾ ಆಕೆ ಇದ್ದ ಸ್ಥಳಕ್ಕೆ ತಾಯಿ ತಲುಪಿದ್ದಾಳೆ. ಈ ವೇಳೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಇದನ್ನೂ ಓದಿ: ನಾಗಾಲ್ಯಾಂಡ್‌ನಲ್ಲಿ ವಿರೋಧ ಪಕ್ಷವೇ ಇಲ್ಲ

STOP RAPE CRIME

ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಬಾಲಕಿಯ ಪೋಷಕರು ಆರೋಪಿಯ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. (Arrest) ಇದನ್ನೂ ಓದಿ: ಸದ್ಯದಲ್ಲೇ ಮಾಡಾಳ್ ವಿರೂಪಾಕ್ಷಪ್ಪ ಬಂಧನ ಆಗಲಿದೆ: ಆರಗ ಜ್ಞಾನೇಂದ್ರ

Share This Article
Leave a Comment

Leave a Reply

Your email address will not be published. Required fields are marked *