ಬಾಗಲಕೋಟೆ: ಮೂರು ವರ್ಷದ ಬಾಲಕಿಯ ಕೆನ್ನೆಗೆ ಬರೆ ಹಾಕಿದ್ದಕ್ಕೆ ಮುಧೋಳ (Mudhol) ತಾಲೂಕಿನ ಗುಲಗಾ ಜಂಬಗಿ ಗ್ರಾಮದ ಅಂಗನವಾಡಿ (Anganwadi) ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಅಮಾನತು ಮಾಡಲಾಗಿದೆ.
ಅಂಗನವಾಡಿ ಸಹಾಯಕಿ ಶಾರವ್ವ ಪಂಚಗಾವಿ ಮತ್ತು ಕಾರ್ಯಕರ್ತೆ ಶೋಭಾ ಹೊಳೆಪ್ಪನವರ್ ಅವರನ್ನು ಮುಧೋಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಪುಟಾಣಿ ಮಗುವಿನ ಕೆನ್ನೆಯ ಮೇಲೆ ಶಾರವ್ವ ಪಂಚಗಾವಿ ಅಡುಗೆ ಮಾಡುವ ಸೌಟಿನಿಂದ ಕೆನ್ನೆಗೆ ಬರೆ ಎಳೆದಿದ್ದಳು. ಮನೆಗೆ ಬಂದ ಮಗಳ ಮುಖವನ್ನು ನೋಡಿ ಸಿಟ್ಟಾದ ತಂದೆ ಪ್ರದೀಪ್ ಬಾಗಲಿ ಅವ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದರು. ಇದನ್ನೂ ಓದಿ: ಶೃಂಗೇರಿ ಅರಣ್ಯದಲ್ಲಿ ಹೂತಿಟ್ಟಿದ್ದ ಬಂದೂಕು, ಸಜೀವ ಗುಂಡುಗಳು ಪತ್ತೆ!
ಈ ದೂರು ಆಧರಿಸಿ ಮುಧೋಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಗುಲಗಾ ಜಂಬಗಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ವೇಳೆ ಬಾಲಕಿ ಕೆನ್ನೆಗೆ ಬರೆ ಎಳೆದಿದ್ದು ದೃಢಪಟ್ಟಿದೆ.
ಕರ್ತವ್ಯ ನಿರ್ಲಕ್ಷ್ಯ ಎಸಗಿದ ಕಾರಣ ಅಂಗನವಾಡಿ ಸಹಾಯಕಿ ಶಾರವ್ವ ಪಂಚಗಾವಿ ಮತ್ತು ಕಾರ್ಯಕರ್ತೆ ಶೋಭಾ ಹೊಳೆಪ್ಪನವರ್ ಅವರನ್ನು ಅಮಾನತು ಮಾಡಲಾಗಿದೆ.