ಬೆಂಗಳೂರು: ನಗರದ ಟಿ.ದಾಸರಹಳ್ಳಿಯಲ್ಲಿ ಗುರುವಾರ ಮುಂಜಾನೆ ನಡೆದ ಸಿಲಿಂಡರ್ ಬ್ಲಾಸ್ಟ್ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂರು ವರ್ಷದ ಬಾಲಕಿ ದೇವಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿಂದು ಸಾವನ್ನಪ್ಪಿದ್ದಾಳೆ.
ದೇವಿಕ ಸಿಲಿಂಡರ್ ಬ್ಲಾಸ್ಟ್ ನಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಳು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
Advertisement
ಸಿಲಿಂಡರ್ ಬ್ಲಾಸ್ಟ್ ನಲ್ಲಿ ಒಟ್ಟು 9 ಮಂದಿಗೆ ಗಂಭೀರ ಗಾಯಗಳಾಗಿದ್ದು, ಲಕ್ಷ್ಮಮ್ಮ, ಮಹೇಶಮ್ಮ, ವೆಂಕಟೇಶಪ್ಪ, ಮಗ ಸೋಮಶೇಖರ್(16), ನಿರಂಜನ್(10), ಹೊನ್ನೂರಪ್ಪ, ಅಲುವೇಲು(7) ದೇವಿಕ (3) ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.
Advertisement
Advertisement
ಇದೀಗ ಗಾಯಾಳಗಳಲ್ಲಿ ಬಾಲಕಿ ದೇವಿಕಾ ಸಾವನ್ನಪ್ಪಿದ್ದರೆ, ಈ ಮಧ್ಯೆ ಆಕೆಯ ಅಕ್ಕ ಅಲವೇಲು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಉಳಿದ ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
Advertisement
ಮನೆಯಲ್ಲಿ ಅಡುಗೆ ಸಿಲಿಂಡರ್ ಸ್ಫೋಟವಾಗಿ ನಾಲ್ವರು ಮಕ್ಕಳು ಸೇರಿ 9 ಮಂದಿಗೆ ಗಂಭೀರ ಗಾಯಗಳಾಗಿತ್ತು. ಈ ಕುಟುಂಬ ಪಾವಗಡ ಮೂಲದಾಗಿದ್ದು, ಮನೆ ಯಜಮಾನ ದೇವರಾಜು ಅವರು ನಗರದಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರು. ಬುಧವಾರ ಮನೆಗೆ ನೆಂಟರು ಕೂಡ ಬಂದಿದ್ದು, ಎಲ್ಲರು ಮಲಗಿದ್ದರು. ದೇವರಾಜು ಕೂಡ ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಗೆ ವಾಪಸ್ ಬಂದಿದ್ದರು. ಮನೆಗೆ ಬಂದು ಬಾಗಿಲು ತಟ್ಟೆದ ಸಮಯದಲ್ಲಿ ಒಳಗಿಂದ ಲೈಟ್ ಅನ್ ಮಾಡಿದಾಗ ಈ ಅವಘಡ ಸಂಭವಿಸಿತ್ತು. ಇದನ್ನೂ ಓದಿ: ಮುಂಜಾನೆ ಎದ್ದು ಲೈಟ್ ಆನ್ ಮಾಡುತ್ತಿದ್ದಂತೆ ಸ್ಫೋಟಗೊಂಡ ಸಿಲಿಂಡರ್- ನಾಲ್ವರು ಮಕ್ಕಳು ಸೇರಿ ಆರು ಜನರಿಗೆ ಗಾಯ!