ಬಳ್ಳಾರಿ: ಮಹಾನಗರ ಪಾಲಿಕೆ (Ballari City Corporation) ಕಸ ಸಂಗ್ರಹಿಸುವ ಟಾಟಾ ಏಸ್ ವಾಹನ ಹರಿದು (Accident) ಮೂರು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಬಳ್ಳಾರಿಯ (Ballari) ಬಾಪೂಜಿ ನಗರದಲ್ಲಿ ನಡೆದಿದೆ.
ನಗರದ ಶೈಲಜಾ- ಸಮರ ದಂಪತಿ ಪುತ್ರ ವಿಕ್ಕಿ (3) ಮೃತ ಬಾಲಕ. ಬೆಳಗ್ಗೆ ಬಾಪುಜಿ ನಗರದಲ್ಲಿ ಕಸ ಸಂಗ್ರಹಿಸಲು ವಾಹನ ಬಂದಿತ್ತು. ಈ ವೇಳೆ, ರಸ್ತೆ ಬದಿ ಆಟ ಆಡುತ್ತಿದ್ದ ವಿಕ್ಕಿ ತಲೆ ಮೇಲೆ ವಾಹನ ಹರಿದಿದೆ. ಕೂಡಲೇ ಗಾಯಳು ಮಗುವನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆಸ್ಪತ್ರೆ ಮುಟ್ಟುವುದರಲ್ಲೇ ಮಗು ಕೊನೆ ಉಸಿರೆಳೆದಿದೆ. ಇದನ್ನೂ ಓದಿ: ಸಿರುಗುಪ್ಪ| ಕಾರಿಗೆ ಲಾರಿ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ
ಮಗುವನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪಾಲಿಕೆ ಮೇಯರ್ ನಂದೀಶ್ ಹಾಗೂ ಪೊಲೀಸರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಇನ್ನೂ ಚಾಲಕನ ಅಜಾಗರೂಕತೆ ಹಾಗೂ ಅತಿ ವೇಗದಂದ ಮಗು ಬಲಿಯಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಟಿಬಿ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ರಿಲೀಸ್ – ಕಂಪ್ಲಿ ಸೇತುವೆ ಮುಳುಗಡೆ