ರಾಂಚಿ: ಅಪಹರಣಕ್ಕೊಳಗಾಗಿದ್ದ ಜಾರ್ಖಂಡ್‍ನ ಮೂರು ವರ್ಷದ ಬಾಲಕನನ್ನು ಪೊಲೀಸರು ರಕ್ಷಿಸಿದ್ದಾರೆ.
ಬಾಲಕನನ್ನು ಆತನ ಸ್ವಂತ ಚಿಕ್ಕಮ್ಮ 1.30 ಲಕ್ಷಕ್ಕೆ ಬಿಹಾರದ ಮಹಿಳೆಯೊಬ್ಬಳಿಗೆ ಮಾರಾಟ ಮಾಡಿದ್ದು, ಇದೀಗ ಆರೋಪಿ ಚಿಕ್ಕಮ್ಮ ಮತ್ತು ಬಾಲಕನನ್ನು ಖರೀದಿಸಿದ ಮಹಿಳೆಯನ್ನು ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ರೆಬಲ್ ಶಾಸಕರ ಕುಟುಂಬದ ಭದ್ರತೆ ಹಿಂಪಡೆದ ಸರ್ಕಾರ- ಶಿಂಧೆ ಆರೋಪ
Advertisement
Advertisement
ಬಿಹಾರದ ಜೆಹಾನಾಬಾದ್ ಜಿಲ್ಲೆಯ ಮಖ್ದುಂಪುರ್ ಪ್ರದೇಶದಲ್ಲಿದ್ದ ಬಾಲಕನನ್ನು ಗುರುವಾರ ರಾತ್ರಿ ರಕ್ಷಿಸಿ ಜಾರ್ಖಂಡ್‍ನ ಹಜಾರಿಬಾಗ್ ಜಿಲ್ಲೆಯ ಮುಫಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿರುವ ಆತನ ಮನೆಗೆ ವಾಪಸ್ ಬಿಡಲಾಯಿತು ಎಂದು ಹೇಳಿದ್ದಾರೆ.
Advertisement
Advertisement
ಜೂನ್ 20ರಂದು ಬಾಲಕ ನಾಪತ್ತೆಯಾಗಿರುವುದಾಗಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಅಪಹರಣಕ್ಕೂ ಮುನ್ನ ಬಾಲಕ ತನ್ನ ಚಿಕ್ಕಮ್ಮನ ಮನೆಯಲ್ಲಿದ್ದನು ಎಂದು ತಿಳಿದ ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಮಗುವನ್ನು ಬಿಹಾರದ ಮಹಿಳೆಗೆ ಮಾರಾಟ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾಳೆ. ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಪಾತ್ರವಿಲ್ಲ: ಶ್ರೀರಾಮುಲು
ನಂತರ ಬಾಲಕನ ತಂದೆಯೊಂದಿಗೆ ಮಖ್ದುಂಪುರಕ್ಕೆ ಪೊಲೀಸರು ತೆರಳಿ ಆತನನ್ನು ರಕ್ಷಿಸಿದ್ದಾರೆ. ಇದೀಗ ಮೇರು ಗ್ರಾಮದ ಬಾಲಕನ ಚಿಕ್ಕಮ್ಮನ ಮನೆಯಲ್ಲಿದ್ದ 1.10 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದು, ಘಟನೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.