ತಿರುವನಂತಪುರಂ: ಇಲಿ ಪಾಷಾಣ ಸೇವನೆ ಮಾಡಿ ಮೂರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.
ನಡೆದಿದ್ದೇನು?: ಮಕ್ಕಳು ಆಟವಾಡುವಾಡುತ್ತಿದ್ದರು. ಈ ವೇಳೆ ಅಲ್ಲಿ ಎಸೆದಿದ್ದ ಇಲಿ ಪಾಷಾಣದ ಟ್ಯೂಬ್ ಸಿಕ್ಕಿದೆ. ಆಗ ಬಾಲಕ ಅದನ್ನು ಸೇವಿಸಿ ಅಸ್ವಸ್ಥನಾಗಿದ್ದಾನೆ ಬಾಲಕನ ಇಲಿ ಪಾಷಾಣ ಸೇವಿಸಿರುವ ವಿಚಾರ ತಿಳಿದ ಪೋಷಕರು ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಟೂತ್ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿ ಪ್ರಾಣ ಬಿಟ್ಟಳು
ಬಾಲಕನಿಗೆ ಹೆಚ್ಚಿನ ತಜ್ಞ ಚಿಕಿತ್ಸೆ ಅಗತ್ಯವಿದ್ದ ಕಾರಣ ಕೊಟ್ಟಾಯಂನಿಂದ ಕೋಝಿಕ್ಕೋಡ್‍ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೂರು ದಿನಗಳ ಕಾಲ ಬಾಲಕನಿಗೆ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್