ನವದೆಹಲಿ: ಇಲ್ಲಿನ ಹಳೇ ರಾಜೇಂದ್ರ ನಗರದಲ್ಲಿರುವ ಕೋಚಿಂಗ್ ಸೆಂಟರ್‌ಗೆ (Delhi Coaching Centre) ಮಳೆ ನೀರು ನುಗ್ಗಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಚಿಂಗ್ ಸೆಂಟರ್ ಮಾಲೀಕ ಹಾಗೂ ಸಂಯೋಜಕನನ್ನ ದೆಹಲಿ ಪೊಲೀಸರು (Delhi Police) ಬಂಧಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
Advertisement
ಕೋಚಿಂಗ್ ಸೆಂಟರ್ ಮಾಲೀಕ ಅಭಿಷೇಕ್ ಗುಪ್ತಾ ಹಾಗೂ ಸಂಯೋಜಕ ದೇಶ್‌ಪಾಲ್ ಸಿಂಗ್ ಬಂಧಿತರು. ಕೇರಳ ಮೂಲದ ನವೀನ್, ಉತ್ತರ ಪ್ರದೇಶದ ಶ್ರೇಯಾ, ತೆಲಂಗಾಣದ ತಾನಿಯಾ ಮೃತ ವಿದ್ಯಾರ್ಥಿಗಳಾಗಿದ್ದಾರೆ. ಇದನ್ನೂ ಓದಿ: ಅಶ್ಲೀಲ ವೀಡಿಯೋ ವೀಕ್ಷಿಸಿ ಸಹೋದರಿಯ ಅತ್ಯಾಚಾರಗೈದು ಹತ್ಯೆ – ಪ್ರಕರಣ ಮುಚ್ಚಿಡಲು ತಾಯಿ, ಹಿರಿಯ ಸಹೋದರಿಯರ ಸಾಥ್
Advertisement
ನಿಯಮ ಉಲ್ಲಂಘನೆ ಕಾರಣ:
ಕೋಚಿಂಗ್ ಸೆಂಟರ್‌ನಿಂದ ನೆಲಮಾಳಿಗೆಯಲ್ಲಿ ಪಾರ್ಕಿಂಗ್ ಮತ್ತು ಸ್ಟೋರ್ ರೂಮ್‌ಗಳಿಗಾಗಿ ಅನುಮತಿ ಪಡೆಯಲಾಗಿತ್ತು. 2 ನೆಲಮಾಳಿಗೆಗಳನ್ನ ಪಾರ್ಕಿಂಗ್ ಮತ್ತು ಸ್ಟೋರ್ ರೂಮ್‌ಗಾಗಿ ಇದೇ ತಿಂಗಳ ಜುಲೈ 9ರಂದು ಎನ್‌ಒಸಿ ಪಡೆದುಕೊಂಡಿತ್ತು. ಆದರೆ ನಿಯಮಕ್ಕೆ ವಿರುದ್ಧವಾಗಿ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ಪ್ರೇಯಸಿಯನ್ನೇ ಬರ್ಬರವಾಗಿ ಇರಿದು ಕೊಂದ ಪ್ರಿಯಕರ – ಶವವನ್ನು ಪೊದೆಗೆ ಎಸೆದು ಎಸ್ಕೇಪ್
Advertisement
#WATCH | Delhi’s Old Rajinder Nagar Coaching Centre Incident, | Shreya Yadav who hails from UP’s Ambedkar Nagar lost her life in the incident.
Saurabh Shukla, Sub-District Magistrate, Ambedkar Nagar says, ” We got the information that a student from Ambedkar Nagar, died from the… pic.twitter.com/sww4kwzHhh
— ANI (@ANI) July 28, 2024
Advertisement
ಈ ಗ್ರಂಥಾಲದಲ್ಲಿ 7 ವಿದ್ಯಾರ್ಥಿಗಳು ಓದುತ್ತಿದ್ದಾಗ ಏಕಾಏಕಿ ನೀರು ನುಗ್ಗಿದ ಪರಿಣಾಮ, ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜೇಂದ್ರ ನಗರದಲ್ಲಿರುವ ಕೋಚಿಂಗ್ ಸೆಂಟರ್‌ಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದ್ದು, ಈ ಕುರಿತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಘಟನೆಯಲ್ಲಿ ಮೃತಪಟ್ಟವರಿಗೆ ಆಪ್ ಸಚಿವೆ ಅತಿಶಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಕಮರಿಗೆ ಉರುಳಿದ ಕಾರು – ಐವರು ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ದುರ್ಮರಣ!