ಶ್ರೀನಗರ: ಭದ್ರತಾ ಪಡೆಗಳಿಗೂ (Security Forces) ಉಗ್ರರಿಗೂ (Terrorists) ನಡೆದ ಗುಂಡಿನ ಚಕಾಮಕಿಯಲ್ಲಿ ಮೂವರು ಉಗ್ರರು ಹತರಾದ ಘಟನೆ ಜಮ್ಮುವಿನ (Jammu) ಹೊರವಲಯದಲ್ಲಿ ನಡೆದಿದೆ.
ಜಮ್ಮುವಿನ ಹೊರವಲಯದಲ್ಲಿ ಟ್ರಕ್‍ವೊಂದು (Truck) ಅನುಮಾನಾಸ್ಪದವಾಗಿ ಓಡಾಡುತ್ತಿತ್ತು. ಇದರಿಂದಾಗಿ ಅನುಮಾನಗೊಂಡ ಪೊಲೀಸರು ಚೆಕ್‍ಪೋಸ್ಟ್‍ನಲ್ಲಿ ಟ್ರಕ್ ಅನ್ನು ತಡೆದಿದ್ದಾರೆ. ಅದಾದ ಬಳಿಕ ಭದ್ರತಾ ಪಡೆಗಳು ಟ್ರಕ್‍ನಲ್ಲಿ ಶೋಧ ಕಾರ್ಯ ನಡೆಸುವಾಗ ಟ್ರಕ್‍ನೊಳಗೆ ಅಡಗಿದ್ದ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು. ಈ ವೇಳೆ ಭದ್ರತಾ ಪಡೆಗಳು ಎನ್‍ಕೌಂಟರ್ (Encounter) ಪ್ರಾರಂಭಿಸಿದ್ದು, ಮೂವರು ಉಗ್ರರನ್ನು ಹತ್ಯೆಗೈದಿದ್ದಾರೆ.
Advertisement
J&K | Visuals from Sidhra area of Jammu where an encounter took place.
(Visuals deferred by unspecified time) pic.twitter.com/6EkijnUuyl
— ANI (@ANI) December 28, 2022
Advertisement
ಗುಂಡಿನ ಕಾಳಗದಲ್ಲಿ ಟ್ರಕ್‍ಗೆ ಬೆಂಕಿ ಹತ್ತಿಕೊಂಡಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರನ್ನು ಕರೆಸಲಾಯಿತು. ಈ ವೇಳೆ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಆತನನ್ನು ಪತ್ತೆ ಹಚ್ಚಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಇನ್ನೂ ಎನ್‍ಕೌಂಟರ್ ನಂತರ ಹೆದ್ದಾರಿಯಲ್ಲಿ ಸಂಚಾರವನ್ನು ನಿಲ್ಲಿಸಲಾಗಿದೆ. ಇದನ್ನೂ ಓದಿ: ಮಿನಿ ಬಸ್, ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ – 12 ವಿದ್ಯಾರ್ಥಿಗಳಿಗೆ ಗಾಯ
Advertisement
J&K | We noticed unusual movement of a truck & followed it. Truck was stopped at Sidhra in Jammu where driver managed to flee. When the truck was searched terrorists hiding inside, fired on the personnel. Retaliatory firing was done: ADGP Mukesh Singh pic.twitter.com/u9UmTFc5rt
— ANI (@ANI) December 28, 2022
Advertisement
ನಿನ್ನೆ 15 ಕೆ.ಜಿ ಐಇಡಿಯನ್ನು ಪೊಲೀಸರು ನಿಷ್ಕ್ರಿಯಗೊಳಿಸಿದ್ದರು. ಇದರಿಂದಾಗಿ ಜಮ್ಮು ಬಳಿಯ ಉಧಂಪುರದಲ್ಲಿ ನಡೆಯಲ್ಲಿ ಉಗ್ರರ ದಾಳಿಯನ್ನು ತಪ್ಪಿಸಲಾಯಿತು. ಇದನ್ನೂ ಓದಿ: ಗುಡಿಸಲಿಗೆ ಬೆಂಕಿ – ತಾಯಿ, 4 ಮಕ್ಕಳು ದಾರುಣ ಸಾವು