ನವದೆಹಲಿ: ಮೂವರು ಸೆಕ್ಸ್ ವರ್ಕರ್ ಮೇಲೆ ಒಂಬತ್ತು ಪುರುಷರು ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ.
ಓರ್ವ ಕ್ಯಾಬ್ ಡ್ರೈವರ್ ಸೇರಿದಂತೆ 8 ಜನ ಖಾಸಗಿ ಭದ್ರತಾ ಸಿಬ್ಬಂದಿ ಸೆಕ್ಸ್ ವರ್ಕರ್ ಮೇಲೆ ಅತ್ಯಾಚಾರ ಎಸಗಿದ್ದಾರೆ. ಘಟನೆ ಬೆಳಗ್ಗೆ 5 ಗಂಟೆಗೆ ಬೆಳಕಿಗೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಮಂಗಳವಾರ ರಾತ್ರಿ ನಾವು ದೆಹಲಿಯ ಲಜಪತ್ ನಗರ ಮೆಟ್ರೋ ನಿಲ್ದಾಣದ ಬಳಿ ಗ್ರಾಹಕರಿಗಾಗಿ ಕಾಯುತ್ತಾ ನಿಂತಿದ್ದೀವಿ. ಈ ವೇಳೆ ಸ್ವಿಫ್ಟ್ ಡಿಸೈರ್ ಓಲಾ ಕ್ಯಾಬ್ ನಲ್ಲಿ ಬಂದ ಚಾಲಕ ನಮ್ಮನ್ನು ಕರೆದ ಎಂದು ದೂರುದಾರೆ ಮತ್ತು ಉಳಿದಿಬ್ಬರು ತಿಳಿಸಿದ್ದಾರೆ.
Advertisement
ಪ್ರತಿ ಪುರುಷರಿಗೆ 3,000 ಸಾವಿರದಂತೆ ಡೀಲ್ ಕುದರಿಸಿದ್ದು, ಡೀಲ್ ಕುದರಿದ ಮೇಲೆ ನೊಯ್ಡಾದ ಸೆಕ್ಟರ್ 18ರಲ್ಲಿ ಇನ್ನೂ ಇಬ್ಬರು ಸ್ನೇಹಿತರು ಕಾಯುತ್ತಿದ್ದು, ಅಲ್ಲಿಗೆ ಹೋಗೋಣ ಎಂದು ಕರೆದೊಯ್ದಿದ್ದಾರೆ. ಪುರುಷರು ಸಂತ್ರಸ್ತ ಮಹಿಳೆಯರಿಗೆ 3,600 ರೂ. ಮುಂಗಡ ಹಣವನ್ನೂ ಪಾವತಿಸಿದ್ದಾರೆ ಎಂದು ಹಿರಿಯ ಎಸ್‍ಪಿ ವೈಭವ್ ಕೃಷ್ಣ ಅವರು ಮಾಹಿತಿ ನೀಡಿದ್ದಾರೆ.
Advertisement
#NoidaPolice ~ थाना एक्सप्रेस वे नोएडा क्षेत्र में 03 युवतियों के साथ रेप करने वाले 07 अभियुक्त गिरफ्तार।
➡️उक्त संबंध में @sspnoida द्वारा दी गई बाइट @Uppolice @dgpup @adgzonemeerut @igrangekanpur pic.twitter.com/yX33QLxwVi
— POLICE COMMISSIONERATE GAUTAM BUDDH NAGAR (@noidapolice) June 19, 2019
Advertisement
ನೊಯ್ಡಾದ ಸೆಕ್ಟರ್ 135ರಲ್ಲಿರುವ ಫಾರ್ಮ್ ಹೌಸ್‍ಗೆ ಮಹಿಳೆಯರನ್ನು ಕರೆದೊಯ್ದಿದ್ದಾರೆ. ಇಬ್ಬರು ಪುರುಷರು ಕಾರ್‍ನಲ್ಲಿರುವವರ ಜೊತೆಗೆ ಇನ್ನೂ 7 ಜನ ಪುರುಷರು ಫಾರ್ಮ್ ಹೌಸ್‍ಗೆ ಬಂದಿದ್ದಾರೆ. ಆಗ ಮಹಿಳೆಯರು ಹಿಂಜರಿಕೆಯಿಂದ ಕ್ಯಾಬ್‍ನಲ್ಲಿದ್ದ ಇಬ್ಬರು ಪುರುಷರಿಗೆ ತಮ್ಮನ್ನು ಮರಳಿ ದೆಹಲಿಗೆ ಬಿಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೊಪ್ಪದ ಪುರುಷರು ತಮ್ಮನ್ನು ಹೊಡೆದಿದ್ದು, ಹಲ್ಲೆ ಮಾಡಿ ಮುಂಗಡವಾಗಿ ಪಾವತಿಸಿದ ಹಣವನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಸಂಬಂಧ ಫಾರ್ಮ್ ಹೌಸ್‍ನ್ನು ಸೀಜ್ ಮಾಡಲಾಗಿದೆ. ಈಗಾಗಲೇ 7 ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನು ಇಬ್ಬರು ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ ಎಂದು ವೈಭವ್ ಕೃಷ್ಣ ಹೇಳಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]