ಬಾಗ್ದಾದ್: ಬಾಗ್ದಾದ್‍ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಾಗೂ ಸೇನಾ ನೆಲೆಯ ಬಳಿ 3 ರಾಕೆಟ್‍ಗಳು ದಾಳಿ ನಡೆಸಿರುವುದಾಗಿ ಇರಾಕಿನ ಅಧಿಕಾರಿಗಳು ತಿಳಿಸಿದ್ದಾರೆ.
ಬಾಗ್ದಾದ್ ವಿಮಾನ ನಿಲ್ದಾಣದ ಬಳಿ ಶುಕ್ರವಾರ ನಡೆದ ರಾಕೆಟ್ ದಾಳಿಯಿಂದಾಗಿ ಕೆಲವು ವಾಣಿಜ್ಯ ವಿಮಾನಗಳಿಗೆ ಹಾನಿಯಾಗಿದೆ. ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.
Advertisement
ಇರಾಕ್‍ನಲ್ಲಿ ಪತ್ರಿಕಾ ಮಾಹಿತಿಗೆ ಅಧಿಕಾರವಿಲ್ಲದಿರುವ ಕಾರಣ ಇಬ್ಬರು ಅನಾಮಧೇಯ ಭದ್ರತಾ ಅಧಿಕಾರಿಗಳು ಶುಕ್ರವಾರ ಮುಂಜಾನೆ ವಿಮಾನ ನಿಲ್ದಾಣ ಹಾಗೂ ಮಿಲಿಟರಿ ಪ್ರದೇಶಗಳ ನಡುವೆ ರಾಕೆಟ್‍ಗಳು ದಾಳಿ ಮಾಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪಬ್‌ಜಿ ವ್ಯಸನ – ತಾಯಿ, ಒಡಹುಟ್ಟಿದವರನ್ನೇ ಗುಂಡಿಕ್ಕಿ ಕೊಂದ ಬಾಲಕ!
Advertisement
Advertisement
ವಿಮಾನ ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದ ಒಂದು ವಿಮಾನಕ್ಕೆ ರಾಕೆಟ್ ದಾಳಿಯಿಂದಾಗಿ ಹಾನಿಯಾಗಿದೆ. ಆದರೂ ಯಾವುದೇ ಕಾರ್ಯಾಚರಣೆಗಳಿಗೆ ಅಡ್ಡಿಯಾಗಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: 74 ವರ್ಷಗಳ ನಂತ್ರ ಸೋದರನ ಭೇಟಿಗೆ ಬಂದ ಭಾರತೀಯನಿಗೆ ಪಾಕಿಸ್ತಾನ ವೀಸಾ!
Advertisement
ಇರಾನಿ ಜನರಲ್ ಖಾಸಿಮ್ ಸೊಲೈಮಾನಿ ಹಾಗೂ ಇರಾಕಿ ಮಿಲಿಟರಿ ಕಮಾಂಡರ್ ಅಬು ಮಹದಿ ಅವರ ಹತ್ಯೆಯ ಬಳಿಕ ವರ್ಷದ ಪ್ರಾರಂಭದಿಂದಲೂ ಇರಾಕ್‍ನಲ್ಲಿ ಅಮೆರಿಕದ ಉಪಸ್ಥಿತಿಯನ್ನು ರಾಕೆಟ್ ಹಾಗೂ ಡ್ರೋನ್ ದಾಳಿಗಳು ಗುರಿಯಾಗಿಸಿಕೊಂಡಿವೆ. ಇರಾಕ್‍ನಲ್ಲಿರುವ ಇರಾನ್ ಪರ ಶಿಯಾ ಬಣಗಳು ಸೊಲೈಮಾನಿ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿವೆ. ದೇಶದಿಂದ ಅಮೆರಿಕ ಪಡೆಗಳ ಸಂಪೂರ್ಣ ನಿರ್ಗಮನದವರೆಗೂ ಈ ರೀತಿಯ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.