ಹಾಂಕಾಂಗ್: ಜಾಗತಿಕ ಇಂಟರ್‌ನೆಟ್ (Internet) ಮತ್ತು ಟೆಲಿಕಮ್ಯೂನಿಕೇಶನ್ ಸಂಪರ್ಕಕ್ಕೆ ಕೆಂಪು ಸಮುದ್ರದ (Red Sea) ಕೆಳಗಡೆ ಹಾಕಲಾಗಿದ್ದ 3 ಡೇಟಾ ಕೇಬಲ್‌ಗಳನ್ನು (Data Cable) ಕತ್ತರಿಸಲಾಗಿದ್ದು ವಿಶ್ವಾದ್ಯಂತ ಇಂಟರ್‌ನೆಟ್ ಸೇವೆಯಲ್ಲಿ ವ್ಯತ್ಯಯವಾಗುವಾಗಲಿದೆ.
ಹಾಂಕಾಂಗ್ ಮೂಲದ HGC ಗ್ಲೋಬಲ್ ಕಮ್ಯುನಿಕೇಷನ್ಸ್ ಹೇಳಿಕೆ ಬಿಡುಗಡೆ ಮಾಡಿ ಈ ವಿಚಾರವನ್ನು ತಿಳಿಸಿದ್ದು, ವಿಶ್ವದ ಸುಮಾರು 25 ಪ್ರತಿಶತದಷ್ಟು ಇಂಟರ್‌ನೆಟ್ ಟ್ರಾಫಿಕ್ (Internet Traffic) ಮೇಲೆ ಪರಿಣಾಮ ಬೀರಲಿದೆ.
Advertisement
ಜಗತ್ತಿನಾದ್ಯಂತ ಟ್ರಾಫಿಕ್ ಅನ್ನು ಮರುಮಾರ್ಗಗೊಳಿಸುವುದರ ಜೊತೆಗೆ ಕೆಂಪು ಸಮುದ್ರದಲ್ಲಿ ಇನ್ನೂ ಕಾರ್ಯನಿರ್ವಹಿಸಬಹುದಾದ 11 ಕೇಬಲ್‌ಗಳ ಮೂಲಕ ಟ್ರಾಫಿಕ್ ಸಮಸ್ಯೆಯನ್ನು ತಗ್ಗಿಸಲು ಕಂಪನಿಗಳು ಈಗ ಕ್ರಮ ಕೈಗೊಳ್ಳುತ್ತಿದೆ. ಇದನ್ನೂ ಓದಿ: ಬೆಂಗ್ಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ – ದೇಶದ 17 ಕಡೆ ಎನ್‌ಐಎ ದಾಳಿ
Advertisement
Advertisement
ಏಷ್ಯಾ – ಆಫ್ರಿಕಾ-ಯುರೋಪ್, ಯುರೋಪ್ ಇಂಡಿಯಾ ಗೇಟ್‌ವೇ, ಸೀಕಾಮ್ ಮತ್ತು ಟಿಜಿಎನ್ ಗಲ್ಫ್ ಕೇಬಲ್‌ಗಳನ್ನು ಕತ್ತರಿಸಲಾಗಿದೆ. ಸಿಯಾಕಾಮ್ ಮತ್ತು ಟಿಜಿಎನ್ ಗಲ್ಫ್ ಕೇಬಲ್‌ನಲ್ಲಿ ಟಾಟಾ ಕಮ್ಯೂನಿಕೇಷನ್ (Tata Communication) ಒಂದು ಭಾಗವಾಗಿದೆ. ಇದನ್ನೂ ಓದಿ: ಆಪಲ್ ಐಫೋನ್‌ಗೆ ಭರ್ಜರಿ 16,584 ಕೋಟಿ ರೂ. ದಂಡ
Advertisement
ಈ ವಿಚಾರ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಟಾಟಾ ಕಮ್ಯೂನಿಕೇಷನ್, ತಕ್ಷಣ ಮತ್ತು ಸೂಕ್ತ ಪರಿಹಾರ ಕ್ರಮಗಳನ್ನು ಪ್ರಾರಂಭಿಸಲಾಗಿದೆ. ನಾವು ವಿವಿಧ ಕೇಬಲ್ ಕಂಪನಿಗಳನ್ನು ಹೂಡಿಕೆ ಮಾಡಿದ್ದೇವೆ. ಈ ರೀತಿಯ ಸಮಸ್ಯೆಯಾದಾಗ ನಮ್ಮ ಸೇವೆಗಳನ್ನು ಸ್ವಯಂಚಲಿತವಾಗಿ ಮರುಹೊಂದಿಸಲು ಸಾಧ್ಯವಾಗುತ್ತದೆ ಎಂದು ಹೇಳಿದೆ.
ಡೇಟಾ ಕೇಬಲ್ ತುಂಡಾಗಿದ್ದು ಹೇಗೆ ಎಂಬುದಕ್ಕೆ ಯಾವುದೇ ಅಧಿಕೃತ ವಿವರ ಸಿಕ್ಕಿಲ್ಲ. ಮಾಧ್ಯಮಗಳು ಪ್ಯಾಲೆಸ್ತೀನ್ (Palestine) ಮೇಲೆ ಇಸ್ರೇಲ್ (Israel) ದಾಳಿ ಮಾಡುತ್ತಿರುವುದಕ್ಕೆ ಪ್ರತಿಯಾಗಿ ಯೆಮೆನ್ ಮೂಲದ ಹೌತಿ ಬಂಡುಕೋರರು (Houthi Rebels) ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಿ ವರದಿ ಮಾಡಿವೆ.
ಯೆಮೆನ್ ಸರ್ಕಾರವು ಬ್ರಿಟಿಷ್ ಮತ್ತು ಯುಎಸ್ ಮಿಲಿಟರಿ ಕಾರ್ಯಾಚರಣೆಯಿಂದ ಈ ಕೇಬಲ್ ತುಂಡಾಗಿದೆ ಎಂದು ದೂಷಿಸಿದೆ. ಜಲಾಂತರ್ಗಾಮಿ ಕೇಬಲ್‌ಗಳನ್ನು ದುರಸ್ತಿ ಮಾಡಲು ಮತ್ತು ನಿರ್ವಹಿಸಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ನಾವು ಉತ್ಸುಕವಾಗಿದ್ದೇವೆ ಎಂದು ಯೆಮೆನ್ ಹೇಳಿದೆ.
ಯುದ್ಧ ನಿಲ್ಲಿಸಲು ಇಸ್ರೇಲ್ ಮೇಲೆ ಒತ್ತಡ ಹೇರುವ ಸಂಬಂಧ ಹೌತಿ ಬಂಡುಕೋರರು ಆರಂಭದಲ್ಲಿ ಕೆಂಪು ಸಮುದ್ರದಲ್ಲಿ ಸಂಚರಿಸುವ ಇಸ್ರೇಲ್ ಸರಕು ಸಾಗಾಣೆ ಹಡುಗಗಳ ಮೇಲೆ ದಾಳಿ ನಡೆಸುತ್ತಿದ್ದರು. ಈಗ ಆ ಭಾಗದಲ್ಲಿ ಸಂಚರಿಸುತ್ತಿದ್ದ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಆರಂಭಿಸಿದ್ದಾರೆ. ಪರಿಣಾಮ ಕೆಂಪು ಸಮುದ್ರದ ಮೂಲಕ ಏಷ್ಯಾ-ಯುರೋಪ್ ಮೂಲಕ ಸಾಗುವ ಹಡಗುಗಳು ಈಗ ಆಫ್ರಿಕಾ ಖಂಡವನ್ನು ಸುತ್ತು ಹಾಕಿ ಯುರೋಪ್‌ಗೆ ತೆರಳುತ್ತಿವೆ.