ಮುಂಬೈ: ಟೀಂ ಇಂಡಿಯಾದ ಕಿಂಗ್ ಆಗಿ ಮೆರೆದಾಡಿದ್ದ ವಿರಾಟ್ ಕೊಹ್ಲಿ ಇದೀಗ ನಾಯಕತ್ವದ ಶಸ್ತ್ರ ತ್ಯಾಗ ಮಾಡಿದ್ದಾರೆ. ಇದೀಗ ಕೊಹ್ಲಿ ಉತ್ತರಾಧಿಕಾರಿಗಾಗಿ ಹುಡುಕಾಟ ಆರಂಭವಾಗಿದೆ. ಇತ್ತ ಮೂರು ಮಾದರಿ ತಂಡಕ್ಕೂ ಒಬ್ಬನೇ ನಾಯಕನನ್ನು ನೇಮಿಸಲು ಬಿಸಿಸಿಐ ಮುಂದಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
Advertisement
ಟಿ20 ನಾಯಕತ್ವ ತ್ಯಜಿಸಿದ್ದ ವಿರಾಟ್ ಕೊಹ್ಲಿ ಬಳಿಕ ಏಕದಿನ ನಾಯಕತ್ವದಿಂದ ಬಿಸಿಸಿಐ ತೆಗೆದು ಹಾಕಿತ್ತು. ಇದೀಗ ಕೊಹ್ಲಿ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ್ದಾರೆ. ಹಾಗಾಗಿ ಸೀಮಿತ ಓವರ್‌ಗಳ ನಾಯಕ ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾರಿಗೆ ಟೆಸ್ಟ್ ನಾಯಕತ್ವದ ಪಟ್ಟವನ್ನೂ ಕಟ್ಟಲು ಬಿಸಿಸಿಐ ಚಿಂತಿಸಿದೆ ಎಂಬ ಗಾಳಿ ಸುದ್ದಿ ಹಬ್ಬಿದೆ. ಇದನ್ನೂ ಓದಿ: ಮುಂದಿನ ಟೀಂ ಇಂಡಿಯಾ ಟೆಸ್ಟ್ ನಾಯಕ ಯಾರು – ಪ್ರತಿಕ್ರಿಯಿಸಿದ ಬಿಸಿಸಿಐ
Advertisement
Advertisement
ಈ ಹಿಂದೆ ಮೂರು ಮಾದರಿ ತಂಡದ ನಾಯಕನಾಗಿ ಮೆರೆದಾಡಿದ ಕಿಂಗ್ ಕೊಹ್ಲಿ ಉತ್ತರಾಧಿಕಾರಿ ರೋಹಿತ್ ಶರ್ಮಾ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ. ಜೊತೆಗೆ ಸೀಮಿತ ಓವರ್‌ಗಳ ತಂಡದ ನಾಯಕನಾಗಿರುವ ಶರ್ಮಾ ಅಲ್ಲಿ ಮಾತ್ರ ಸೀಮಿತವಾಗಿರಲಿ ಟೆಸ್ಟ್ ತಂಡಕ್ಕೆ, ತಂಡದಲ್ಲಿರುವ ಕೆ.ಎಲ್ ರಾಹುಲ್, ರಿಷಭ್ ಪಂತ್ ಅಥವಾ ಜಸ್ಟ್ರೀತ್ ಬುಮ್ರಾರಿಗೆ ವಹಿಸಲಿ ಎಂಬ ಕೂಗು ಕೂಡ ಕೇಳಿಬರುತ್ತಿದೆ. ಇದನ್ನೂ ಓದಿ: ಹಾರಿದವ ಒಬ್ಬ, ಹಿಡಿದವ ಇನ್ನೊಬ್ಬ – ಮ್ಯಾಕ್ಸ್‌ವೆಲ್ ಕ್ಯಾಚ್ ಕಂಡು ದಂಗಾದ ಫೀಲ್ಡರ್
Advertisement
ಬಿಸಿಸಿಐ ಕೂಡ ಟೀಂ ಇಂಡಿಯಾದ ಭವಿಷ್ಯದ ದೃಷ್ಟಿಯಿಂದ ಟೆಸ್ಟ್ ತಂಡಕ್ಕೆ ನೂತನ ಸಾರಥಿಯನ್ನು ನೇಮಿಸಲು ಮನಸ್ಸು ಮಾಡಿದರು ಅಚ್ಚರಿಯಿಲ್ಲ. ಈಗಾಗಲೇ ತಂಡದಲ್ಲಿ ರಾಹುಲ್ ಮತ್ತು ಪಂತ್‍ಗೆ ಐಪಿಎಲ್‍ನಲ್ಲಿ ನಾಯಕತ್ವ ನಿಭಾಯಿಸಿ ಅಭ್ಯಾಸವಿದೆ. ಜೊತೆಗೆ ಬುಮ್ರಾ ಸ್ವಇಚ್ಚೆಯಿಂದ ನಾನು ನಾಯಕನಾಗಲು ಸಿದ್ಧ ಎಂಬ ಹೇಳಿಕೆ ನೀಡಿದ್ದಾರೆ. ಹಾಗಾಗಿ ಬಿಸಿಸಿಐ ತಂಡದ ಹಿತದೃಷ್ಟಿಯಿಂದ ಅಚ್ಚರಿಯ ನಿರ್ಧಾರಕ್ಕೆ ಕೈ ಹಾಕುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ.