– ಯುಪಿಎಸ್‍ಸಿ ಪರೀಕ್ಷೆಯಲ್ಲಿ ತುಮಕೂರಿನ ಮೂವರ ಸಾಧನೆ
ತುಮಕೂರು: 2016ನೇ ಸಾಲಿನ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಕಲ್ಪತರುನಾಡು ತುಮಕೂರಿನ ಮೂವರು ಸಾಧನೆ ಮಾಡಿದ್ದಾರೆ. ಶಿರಾ ಗೇಟ್‍ನ ಪ್ರಿಯಾಂಕಾ 84 ನೇ ಶ್ರೇಯಾಂಕ ಪಡೆದಿದ್ದು, ಕುಣಿಗಲ್‍ನ ಕೆಂಪಹೊನ್ನಯ್ಯ 340ನೇ ಶ್ರೇಯಾಂಕ ಹಾಗೂ ತುಮಕೂರು ನಗರದ ವಾಲ್ಮೀಕಿ ನಗರದ ಟಿ.ಎನ್.ನಿತನ್ ರಾಜ್ 476 ನೇ ಶ್ರೇಯಾಂಕ ಗಳಿಸುವುದರ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
Advertisement
ಪ್ರಿಯಾಂಕಾ ಮೂಲತಃ ಮಧುಗಿರಿಯವರಾಗಿದ್ದು ತಂದೆ ಗೋವಿಂದರಾಜು ಶಿರಾಗೇಟ್ ಬಳಿಯ ಕಾಲೇಜ್‍ವೊಂದರಲ್ಲಿ ಉಪನ್ಯಾಸಕರಾಗಿದ್ದಾರೆ. ಪಿಯುಸಿಯಲ್ಲಿ ಜಿಲ್ಲೆಗೆ ಟಾಪರ್ ಆಗಿದ್ದ ಪ್ರಿಯಾಂಕ, ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಯುಪಿಎಸ್‍ಸಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಯಶಸ್ಸು ಕಂಡಿದ್ದಾರೆ.
Advertisement
Advertisement
ಇನ್ನೊಂದೆಡೆ ಅಂಧ ಅಭ್ಯರ್ಥಿ ಕೆಂಪಹೊನ್ನಯ್ಯ ಕನ್ನಡದಲ್ಲೇ ಪರೀಕ್ಷೆ ಬರೆದು 340 ನೇ ಶ್ರೇಯಾಂಕ ಪಡೆದಿದ್ದಾರೆ. ನಾಲ್ಕನೇ ತರಗತಿ ಓದುತಿದ್ದಾಗ ಕಣ್ಣು ಕಳೆದುಕೊಂಡ ಕೆಂಪಹೊನ್ನಯ್ಯ ಸಾಧಿಸುವ ಹಠದಿಂದ ಓದಿ ಮೂರನೇ ಬಾರಿಗೆ ಯಶಸ್ಸು ಕಂಡಿದ್ದಾರೆ.
Advertisement
476 ನೇ ಶ್ರೇಯಾಂಕ ಪಡೆದ ಟಿಎನ್ ನಿತನ್ ರಾಜ್ ಬಿ.ಇ. ಪದವಿ ಪಡೆದಿದ್ದಾರೆ. ಕಳೆದ ಬಾರಿಯ ಪರೀಕ್ಷೆ ಯಲ್ಲಿ 843 ನೇ ಶ್ರೇಯಾಂಕ ಪಡೆದ ಇವರು ಈ ಬಾರಿ 476ನೇ ಶ್ರೇಯಾಂಕ ಪಡೆದು ಸಾಧನೆ ಮಾಡಿದ್ದಾರೆ.