ಬೆಂಗಳೂರು: ದೇಶದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಗಳ ಪಟ್ಟಿಯಲ್ಲಿ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಕೆಜೆ ಜಾರ್ಜ್ ನಂಟಿರುವ ಪ್ರತಿಷ್ಠಿತ ಎಂಬೆಸಿ ಗ್ರೂಪ್ ಮಾಲೀಕ ಜಿತೇಂದ್ರ ವೀರ್ವಾನಿ 2ನೇ ಸ್ಥಾನ ಪಡೆದಿದ್ದಾರೆ.
ಹುರೂನ್ ರಿಪೋರ್ಟ್ ಹಾಗೂ ಗ್ರೋಹೆ ಇಂಡಿಯಾ ಸಂಸ್ಥೆಗಳು ದೇಶದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಗಳ ಪಟ್ಟಿಯನ್ನು ತಯಾರಿಸಿದೆ. ಈ ಪಟ್ಟಿಯಲ್ಲಿ ಹೆಚ್ಚು ರಿಯಲ್ ಎಸ್ಟೇಟ್ ಉದ್ಯಮಿಗಳು ವಾಸಿಸುವ ಪಟ್ಟಿಯಲ್ಲೂ ಬೆಂಗಳೂರು 2ನೇ ಸ್ಥಾನ ಪಡೆದಿದೆ.
Advertisement
Advertisement
ಎಂಬೆಸಿ ಗ್ರೂಪ್ ಮಾಲೀಕ ಜಿತೇಂದ್ರ ವೀರ್ವಾನಿ ಅವರು 23,160 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಮಹಾರಾಷ್ಟ್ರದ ಲೋಧಾ ಗ್ರೂಪ್ ಮಾಲೀಕರಾದ ಮಲಬಾರ್ ಹಿಲ್ಸ್ ಕ್ಷೇತ್ರದ ಬಿಜೆಪಿ ಶಾಸಕ ಮಂಗಲ್ ಪ್ರಭಾತ್ ಲೋಧಾ 27,150 ಕೋಟಿ ರೂ. ಆಸ್ತಿಯನ್ನ ಹೊಂದಿದ್ದಾರೆ. ಕಳೆದ ವರ್ಷದ 18,610 ಕೋಟಿ ರೂ. ಆಸ್ತಿಯನ್ನು ಹೊಂದಿದ್ದರು.
Advertisement
ಉಳಿದಂತೆ ಪಟ್ಟಿಯಲ್ಲಿ ಆರ್ ಎಂಜಿ ರಿಯಲ್ ಎಸ್ಟೇಟ್ ಸಂಸ್ಥೆಯ ಮನೋಜ್ ಮೆಂಡಾ ಹಾಗೂ ರಾಜ್ ಮೆಂಡಾ ಕ್ರಮವಾಗಿ 5,900 ನೇ ಸ್ಥಾನ ಪಡೆದಿದ್ದಾರೆ. ಮನೋಜ್ ಮೆಂಡಾ ಹಾಗೂ ರಾಜ್ ಮೆಂಡಾ ಇಬ್ಬರು 5.900 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ.
Advertisement
ಟಾಪ್ 10 ಪಟ್ಟಿಯಲ್ಲಿ ಯಾರಿದ್ದಾರೆ?
ಡಿಎಲ್‍ಎಫ್ ರಿಯಲ್ ಎಸ್ಟೇಟ್ ಸಂಸ್ಥೆಯ ಮಾಲೀಕರಾದ ಜಿತೇಂದ್ರ ವಿರ್ವಾನಿ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದು, 23,160 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ. 4 ಮತ್ತು ಐದನೇ ಸ್ಥಾನದಲ್ಲಿ ಕೇ ರಹೇಜಾ ಸಂಸ್ಥೆಯ ಚಂದ್ರು ರಹೇಜಾ ಹಾಗೂ ಒಬೇರಾಯ್ ರಿಯಾಲಿಟಿ ಸಂಸ್ಥೆಯ ವಿಕಾಸ್ ಓಬೇರಾಯ್ ಸ್ಥಾನ ಪಡೆದಿದ್ದು, ಕ್ರಮವಾಗಿ 14,420 ಕೋಟಿ ರೂ. ಹಾಗೂ 10,980 ಕೋಟಿ ರೂ ಆಸ್ತಿಯನ್ನ ಹೊಂದಿದ್ದಾರೆ.
ಹಿರಾನಂದನಿ ಸಂಸ್ಥೆಯ ಮಾಲೀಕರಾದ ನಿರಂಜನ್ ಹಿರಾನಂದನಿ, ಸುರೇಂದ್ರ ಹಿರಾನಂದಿನಿ ತಲಾ 7,880 ಕೋಟಿ ಆಸ್ತಿಯೊಂದಿಗೆ 6 ಮತ್ತು 7 ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ 8ನೇ ಸ್ಥಾನದಲ್ಲಿ ಪಿರಾಮಾಲ್ ಸಂಸ್ಥೆಯ ಮಾಲೀಕರಾದ ಅಜಯ್ ಪಿರಾಮಾಲ್ ಮತ್ತು ಕುಟುಂಬ 6,380 ಕೋಟಿ ರೂ. ಆಸ್ತಿಯನ್ನು ಹೊಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv