ಬೆಂಗಳೂರು: ಸಾರ್ವಜನಿಕರ ಬಳಿ ಇರುವ ವನ್ಯಜೀವಿ (Wildlife) ಅಂಗಾಂಗಗಳನ್ನು ಅರಣ್ಯ ಇಲಾಖೆಗೆ (Forest Department) ವಾಪಸ್ ಮಾಡಲು 3 ತಿಂಗಳ ಅವಧಿ ನೀಡಲು ಅರಣ್ಯ ಇಲಾಖೆ ನಿರ್ಧಾರ ಮಾಡಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshawr Khandre) ನೇತೃತ್ವದಲ್ಲಿ ಇಂದು ವಿಕಾಸ ಸೌಧದಲ್ಲಿ ಸಭೆ ನಡೆಸಿ 3 ತಿಂಗಳ ಕಾಲಾವಕಾಶ ಕೊಡುವ ನಿರ್ಧಾರ ಮಾಡಲಾಗಿದೆ.
ಅರಣ್ಯ ಇಲಾಖೆ, ಕಾನೂನು ಇಲಾಖೆ ಸಭೆ ಬಳಿಕ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ವನ್ಯಜೀವಿ ಅಂಗಾಗ ವಾಪಸ್ ಕೊಡಲು ಕೊನೇ ಅವಕಾಶ ಕೊಡಲು ತೀರ್ಮಾನ ಮಾಡಲಾಗಿದೆ. ಒನ್ ಟೈಂ ಪ್ರಾಣಿ ಅಂಗಾಂಗ ಹಿಂತಿರುಗಿಸಲು 3 ತಿಂಗಳು ಸಮಯ ಕೊಡಲು ತೀರ್ಮಾನ ಆಗಿದೆ. ಕಾನೂನು ಇಲಾಖೆ ಕೂಡಾ ಇದಕ್ಕೆ ಒಪ್ಪಿಗೆ ನೀಡಿದೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತೇವೆ ಎಂದರು. ಇದನ್ನೂ ಓದಿ: ಬಿಜೆಪಿಗೆ ಅಧಿಕಾರ ನೆತ್ತಿಗೇರಿದೆ, ಅದಕ್ಕೆ ಸಂಸದರನ್ನ ಅಮಾನತು ಮಾಡಿದೆ: ಈಶ್ವರ್ ಖಂಡ್ರೆ
ಯಾವುದೇ ಅಂಗಾಂಗ ಇದ್ದರೂ ಜನರು ವಾಪಸ್ ಕೊಡಬೇಕು. 1978 ಹಿಂದಿನಿಂದ ಪ್ರಾಣಿ ಅಂಗಾಂಗ ಇರೋರಿಗೆ ಈ ಅವಕಾಶ ಕೊಡಲಾಗಿದೆ. ಅಂಗಾಗ ವಾಪಸ್ ಮಾಡಿದರೆ ಕೇಸ್ ಹಾಕಲ್ಲ, ದಂಡವೂ ಹಾಕಲ್ಲ ಎಂದು ಸ್ಪಷ್ಟಪಡಿಸಿದರು. ವನ್ಯಜೀವಿ ಅಂಗಾಂಗಗಳು ವಾಪಸ್ ಪಡೆದ ಬಳಿಕ ಅದನ್ನು ಸಂಪೂರ್ಣವಾಗಿ ನಾಶ ಮಾಡುತ್ತೇವೆ. ಅದನ್ನು ಸರ್ಕಾರದ ಬಳಿ ಇಟ್ಟುಕೊಳ್ಳುವ ಹಾಗೆ ಇಲ್ಲ. ವನ್ಯಜೀವಿ ಅಂಗಾಂಗ ಸಂಗ್ರಹ ಆದ ಬಳಿಕ ಸಿಎಂ ಸಮ್ಮುಖದಲ್ಲಿ ಅದನ್ನು ನಾಶ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಾರಜೋಳರ ಮೇಲೆ ಹಲ್ಲೆ ಯತ್ನದ ಹಿಂದೆ ಡಾ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಕೈವಾಡ- ಪಿ.ರಾಜೀವ್ ಆರೋಪ