ಹೈದರಾಬಾದ್: ನವವಿವಾಹಿತೆ 3 ತಿಂಗಳ ಗರ್ಭಿಣಿಯೊಬ್ಬರು ಸೆಲ್ಫಿ ವಿಡಿಯೋ ಮಾಡಿ ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ತಡೆಪಲ್ಲಿಗುಡೆಮ್ ನಗರದಲ್ಲಿ ನಡೆದಿದೆ.
ಮೌನಿಕ ಆತ್ಯಹತ್ಯೆ ಮಾಡಿಕೊಂಡ 3 ತಿಂಗಳ ಗರ್ಭಿಣಿ. ಈಕೆ ಉದ್ದಂಡಿ ನಾಗೇಶ್ವರ ರಾವ್ ಮಗಳಾಗಿದ್ದು, ಹೈದರಾಬಾದ್‍ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನರೇಂದ್ರ ಎಂಬುವವರ ಜೊತೆ ಆಗಸ್ಟ್ ತಿಂಗಳಿನಲ್ಲಿ ಮದುವೆಯಾಗಿತ್ತು.
ಮೌನಿಕಗೆ ಪತಿಯ ಗುಣ ನಡತೆ ಇಷ್ಟವಾಗಿರಲಿಲ್ಲ. ಆದ್ದರಿಂದ ತನ್ನ ಪೋಷಕರಿಗೆ ಪತಿ ಬಳಿ ಇರುವ ಹಣ, ಚಿನ್ನವನ್ನು ಹಿಂತೆಗೆದುಕೊಳ್ಳುವಂತೆ ಹೇಳಿದ್ದರು. ದರೆ ಕಳೆದ ವಾರ ಮೌನಿಕ ಸಂಕ್ರಾಂತಿ ಹಬ್ಬದ ವರೆಗೂ ಇರಲು ತನ್ನ ತವರು ಮನೆಗೆ ಬಂದಿದ್ದಾರೆ.
ಸೋಮವಾರ ಬೆಳಿಗ್ಗೆ ಪೋಷಕರು ಮನೆಯಿಂದ ಹೊರ ಹೋಗಿದ್ದ ಸಂದರ್ಭದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಫೋನಿನಲ್ಲಿ ಸೆಲ್ಫಿ ವಿಡಿಯೋ ಮಾಡಿದ್ದು, ವಿಡಿಯೋದಲ್ಲಿ ಪತಿ ಇಷ್ಟ ಇಲ್ಲ ಎಂದು ತಿಳಿಸಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.