ಗಾಂಧಿನಗರ: ಭಾರತೀಯ ಕೋಸ್ಟ್ ಗಾರ್ಡ್ (Indian Coast Guard) ಹೆಲಿಕಾಪ್ಟರ್ ಗುಜರಾತ್ (Gujarat) ಸಮುದ್ರದಲ್ಲಿ ತುರ್ತು ಭೂಸ್ಪರ್ಶ (Emergency Landing) ಮಾಡಿದ್ದು, ಅದರಲ್ಲಿದ್ದ ಇಬ್ಬರು ಪೈಲಟ್‍ಗಳು ಸೇರಿ ಮೂವರು ನಾಪತ್ತೆಯಾಗಿದ್ದಾರೆ.
On 02 Sep 2024, @IndiaCoastGuard ALH helicopter was launched at 2300 hrs to evacuate an injured crew member from the Motor Tanker Hari Leela off #Porbandar, #Gujarat. The helicopter had to make an emergency hard landing and ditched into sea. One crew member recovered, search for…
— Indian Coast Guard (@IndiaCoastGuard) September 3, 2024
Advertisement
ಓರ್ವ ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕೋಸ್ಟ್ ಗಾರ್ಡ್‍ನ ನಾಲ್ಕು ಹಡಗುಗಳು ಮತ್ತು ಎರಡು ವಿಮಾನಗಳ ಮುಲಕ ನಾಪತ್ತೆಯಾದ ಸಿಬ್ಬಂದಿಯನ್ನು ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಜಮ್ಮು ಸೇನಾ ಶಿಬಿರದಲ್ಲಿ ಯೋಧನ ನಿಗೂಢ ಸಾವು: ಉಗ್ರರ ದಾಳಿಯಾಗಿರುವ ಶಂಕೆ
Advertisement
Advertisement
ಹೆಲಿಕಾಪ್ಟರ್‍ನ ಅವಶೇಷಗಳು ಪತ್ತೆಯಾಗಿದ್ದು, ಸಿಬ್ಬಂದಿಯ ಬಗ್ಗೆ ಯಾವುದೇ ಸುಳಿವು ಇನ್ನೂ ಸಿಕ್ಕಿಲ್ಲ. ಹೆಲಿಕಾಪ್ಟರ್ ತುರ್ತು ಭೂಸ್ಪರ್ಶಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಪತ್ನಿಗೆ 50:50 ಅನುಪಾತದಲ್ಲಿ ಸೈಟ್ ಕೊಟ್ಟಿದ್ದು ತಪ್ಪು – ಅಧಿಕೃತವಾಗಿ ಒಪ್ಪಿಕೊಂಡ ಸರ್ಕಾರ
Advertisement