ಮುಂಬೈ: 627 ಗ್ರಾಂ ಚಿನ್ನ, 24.71 ಲಕ್ಷ ರೂ. ಲೂಟಿ ಮಾಡಿ ಪರಾರಿಯಾಗಿದ್ದ ಮೂವರು ಕಳ್ಳರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ತೌಸಿಫ್ ಖುರೇಶಿ, ಪಾಷಾ ಗೌಸ್ ಮತ್ತು ಮೊಹಮ್ಮದ್ ಸಲೀಂ ಹಬೀಬ್ ಖುರೇಶಿ ಅಲಿಯಾಸ್ ಮುನ್ನಾ ಬಂಧನಕ್ಕೆ ಒಳಗಾದವರು. ಈ ಮೂವರು ಮುಂಬೈನಲ್ಲಿ 627 ಗ್ರಾಂ ಚಿನ್ನ, 24.71 ಲಕ್ಷ ರೂ. ಲೂಟಿ ಮಾಡಿ ಪರಾರಿಯಾಗಿದ್ದು, ದೇಶದ ವಿವಿಧ ಭಾಗಗಳಲ್ಲಿ ಕಳ್ಳತನ ಮಾಡುತ್ತಿದ್ದರು. ಇವರನ್ನು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಪತ್ತೆ ಮಾಡಲಾಯಿತು. ತೌಸಿಫ್ ಮತ್ತು ಪಾಷಾ ಅವರನ್ನು ಹೈದರಾಬಾದ್‍ನಲ್ಲಿ ಪತ್ತೆ ಮಾಡಲಾಯಿತು. ಮುನ್ನಾ ಬೆಂಗಳೂರಿನಲ್ಲಿ ಇದ್ದರಿಂದ ನಮ್ಮ ಒಂದು ತಂಡವನ್ನು ಕರ್ನಾಟಕಕ್ಕೆ ಕಳುಹಿಸಲಾಯಿತು. ಕೊನೆಗೆ ಅವನನ್ನು ರಾಯಚೂರಿನಲ್ಲಿ ಬಂಧಿಸಲಾಯಿತು, ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ವಿರುದ್ಧ ಪ್ರಕರಣ ದಾಖಲು
Advertisement
Advertisement
ಈ ಕಳ್ಳರಿಂದ 21.60 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದೇವೆ. ಈ ಮೂವರು ಮನೆಗಳಿಗೆ ಹೋಗಿ ಕಳ್ಳತನ ಮಾಡುತ್ತಿದ್ದರು. ಒಂದು ಕಡೆ ಕಳ್ಳತನ ಮಾಡಿ ಅಲ್ಲಿಂದ ಬೇರೆ ರಾಜ್ಯಕ್ಕೆ ಹೋಗಿ ತಪ್ಪಿಸಿಕೊಳ್ಳಲು ವಿಮಾನಗಳನ್ನು ಬಳಸಿಕೊಳ್ಳುತ್ತಿದ್ದರು. ಆದರೆ ತನಿಖೆ ಮೂಲಕ ಈ ಕಳ್ಳರನ್ನು ಪತ್ತೆ ಹಚ್ಚಲಾಗಿದೆ. ಅದು ಅಲ್ಲದೇ ಈ ಮೂವರು ಮಾರುವೇಷದಲ್ಲಿ ರಸ್ತೆಗಳಲ್ಲಿ ಓಡಾಡುತ್ತಿದ್ದರು ಎಂದರು.
Advertisement
Advertisement
ಅದರಲ್ಲಿಯೂ ಈ ಗುಂಪಿನಲ್ಲಿರುವ ಮೊಹಮ್ಮದ್ ಸಲೀಂ ಖುರೇಶಿ ಕ್ರಿಮಿನಲ್ ಆಗಿದ್ದು, ಆತನ ವಿರುದ್ಧ ಕನಿಷ್ಠ 215 ಪ್ರಕರಣಗಳಿವೆ. ಮೊಹಮ್ಮದ್ ರಾಜಸ್ಥಾನದ ಪ್ರಮುಖ ವ್ಯಕ್ತಿಗಳ ಮನೆಗಳಲ್ಲಿ ದರೋಡೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎರಡನೇ ಬಾರಿ ಸರ್ವರ್ ಡೌನ್ – ಸಮಸ್ಯೆ ಬಗೆಹರಿಸಿ ಬಳಕೆದಾರರಲ್ಲಿ ಕ್ಷಮೆಯಾಚಿಸಿದ ಇನ್‍ಸ್ಟಾಗ್ರಾಮ್