ಲಕ್ನೋ: ಬಿರಿಯಾನಿ (Biriyani) ಕೊಡಲು ರೆಸ್ಟೋರೆಂಟ್ ಸಿಬ್ಬಂದಿ ತಡ ಮಾಡಿದ್ದಕ್ಕೆ ಸಿಟ್ಟಿಗೆದ್ದು ಮೂವರು ವ್ಯಕ್ತಿಗಳು ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶ (Uttarpradesh) ದಲ್ಲಿ ನಡೆದಿದೆ.
Advertisement
ಗ್ರೇಟರ್ ನೋಯ್ಡಾದ ಅನ್ಸಲ್ ಪ್ಲಾಜಾ ಮಾಲ್‍ನಲ್ಲಿರುವ ಝೌಕ್ ರೆಸ್ಟೋರೆಂಟ್‍ನಲ್ಲಿ ಬುಧವಾರ ರಾತ್ರಿ 10: 30 ರ ಸುಮಾರಿಗೆ ಈ ಘಟನೆ ನಡೆದಿದೆ. ಬಂಧಿತರನ್ನು ಮನೋಜ್, ರರವೇಶ್ ಮತ್ತು ಕ್ರಿಶ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ದಾದ್ರಿ ನಿವಾಸಿಗಳು.
Advertisement
Advertisement
ಸಿಬ್ಬಂದಿಗೆ ತಲಿಸುತ್ತಿರುವ ದೃಶ್ಯವು ರೆಸ್ಟೋರೆಂಟ್ (Restorent) ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ರೆಸ್ಟೋರೆಂಟ್ ನ ಟೇಬಲ್ ನಲ್ಲಿ ಮೂವರು ಯುವಕರು ಕುಳಿತಿರುವುದನ್ನು ಕಾಣಬಹುದಾಗಿದೆ. ಸ್ವಲ್ಪ ಹೊತ್ತಿನವರೆಗೆ ಕುಳಿತಿದ್ದ ಅವರಲ್ಲಿ ಓರ್ವ ಇದ್ದಕ್ಕಿದ್ದಂತೆ ಎದ್ದು, ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ.
Advertisement
Breaking News: Due to not getting the desired piece in the chicken biryani and getting the biryani late, employee was beaten up fiercely.
????Zauk Restaurant, Ansal Plaza Mall, Greater Noida, UP.
+ pic.twitter.com/7595gzvDrQ
— Ashwini Shrivastava (@AshwiniSahaya) November 10, 2022
ನಂತರ ಆತನ ಕುತ್ತಿಗೆಯನ್ನು ಹಿಡಿದು ಎಳೆದುಕೊಂಡು ಬಂದು ಚೆನ್ನಾಗಿ ಥಳಿಸಿದ್ದಾನೆ. ಇಷ್ಟು ಮಾತ್ರವಲ್ಲದೆ ಸಿಬ್ಬಂದಿಯನ್ನು ರೆಸ್ಟೋರೆಂಟ್‍ನಿಂದ ಹೊರಗೆಳೆದುಕೊಂಡು ಬಂದು ಮೂವರು ಒದ್ದು, ಥಳಿಸಿದ್ದಾರೆ.
ಬುಧವಾರ ರಾತ್ರಿ ಮೂವರು ಯುವಕರು ಊಟಕ್ಕೆಂದು ರೆಸ್ಟೋರೆಂಟ್‍ಗೆ ತೆರಳಿ ಚಿಕನ್ ಬಿರಿಯಾನಿ (Chicken Biriyani) ಆರ್ಡರ್ ಮಾಡಿದ್ದರು. ಸ್ವಲ್ಪ ಸಮಯದ ನಂತರ, ಅಲ್ತಾಫ್ ಎಂಬ ಸಿಬ್ಬಂದಿ ಬಿರಿಯಾನಿ ಮುಗಿದಿದೆ ಎಂದು ಹೇಳಿದರು. ಈ ವೇಳೆ ಆರೋಪಿಗಳಲ್ಲಿ ಒಬ್ಬನು ತನ್ನ ತಾಳ್ಮೆ ಕಳೆದುಕೊಂಡನು. ನಂತರ ಸಿಬ್ಬಂದಿ ಕಾಲರ್ ಅನ್ನು ಹಿಡಿದನು ಎಂದು ಗ್ರೇಟರ್ ನೋಯ್ಡಾದ ಎಸಿಪಿ ಮಹೇಂದ್ರ ದೇವ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಸಂಬಂಧ ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ್ದಕ್ಕಾಗಿ ಶಿಕ್ಷೆ) ಮತ್ತು 147 (ಗಲಭೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.