ಉಡುಪಿ: ಅಮಲು ಪದಾರ್ಥ ಸೇವಿಸಿ ಮೂವರು ವಿದ್ಯಾರ್ಥಿಗಳು ರಸ್ತೆಯಲ್ಲಿ ರಂಪಾಟ ಮಾಡಿದ ಘಟನೆ ಜಿಲ್ಲೆಯ ಕಾಪೂ ತಾಲೂಕಿನ ಪಡುಬಿದ್ರೆ ಪೇಟೆಯಲ್ಲಿ ನಡೆದಿದೆ.
Advertisement
ಚೆನ್ನೈ ಮೂಲದ ವಿದ್ಯಾರ್ಥಿಗಳಾದ ಇವರು ನಗರದ ಖಾಸಗಿ ಕಾಲೇಜ್‍ವೊಂದರಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಒಂದೇ ಸ್ಕೂಟರ್ ನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಪೆಟ್ರೋಲ್ ಖಾಲಿಯಾಗಿ ಸ್ಕೂಟರ್ ನಿಂತಿತ್ತು. ಈ ವೇಳೆ ಈ ಮೂವರ ನಡುವೆ ಮಾರ್ಗ ಮಧ್ಯೆ ಗಲಾಟೆಯಾಗಿದ್ದು, ಗಲಾಟೆಯು ತಾರಕಕ್ಕೇರಿ ಪರಸ್ಪರ ಹೊಡೆದಾಡಿ ಕೊಂಡಿದ್ದಾರೆ. ಇದನ್ನೂ ಓದಿ: KGF ಚಿತ್ರ ತಂಡದಿಂದ ಯಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್
Advertisement
ವಿದ್ಯಾರ್ಥಿಗಳ ಬೀದಿ ರಂಪಾಟ ಮಿತಿಮೀರಿದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಲಾಟೆ ಬಿಡಿಸಲು ಬಂದ ಪೊಲೀಸರಿಗೆ ಅಮಲು ಪದಾರ್ಥ ಸೇವಿಸಿದ್ದ ವಿದ್ಯಾರ್ಥಿಗಳು, ಆವಾಜ್ ಹಾಕಿದ್ದು, ನಮ್ಮನ್ನು ಮುಟ್ಟಿದರೆ ಪರಿಣಾಮ ಚೆನ್ನಾಗಿರಲ್ಲ ಅಂತ ಕೂಗಾಡಿದ್ದಾರೆ. ನಾವು ಯಾರು ಅಂತ ನಿಮಗೆ ನಾಳೆ ಬೆಳಗ್ಗೆ ತೋರಿಸುತ್ತೇವೆ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದಾರೆ.
Advertisement
Advertisement
ಸಾರ್ವಜನಿಕರ ಸಹಕಾರದಿಂದ ಪೊಲೀಸರು ಮೂವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿದ್ಯಾರ್ಥಿಗಳ ಹೈಡ್ರಾಮಾದಿಂದ ಸ್ಥಳೀಯ ನಾಗರಿಕರಿಗೆ ಪುಕ್ಕಟೆ ಮನರಂಜನೆ ಸಿಕ್ಕಂತಾಗಿದೆ. ವೀಕೆಂಡ್ ಕರ್ಫ್ಯೂ ಇರುವ ಕಾರಣ ಒಂದು ದಿನ ಮುಂಚಿತವಾಗಿಯೇ ಈ ಗೆಳೆಯರ ಗುಂಪು ವಾರಾಂತ್ಯದ ನಶೆ ಏರಿಸಿರುವ ಸಾಧ್ಯತೆ ಇದ್ದು, ಡ್ರಗ್ಸ್ ಅಥವಾ ಇತರ ಅಮಲು ಪದಾರ್ಥ ಸೇವಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಭಿಮಾನಿ ಕೈಯಲ್ಲಿದ್ದ ಟ್ಯಾಟೂಗೆ ರಾಮ್ ಚರಣ್ ಬೌಲ್ಡ್