ಚಾಮರಾಜನಗರ: ಚಿರತೆ ಎಂದಾಕ್ಷಣ ರಸ್ತೆ ದಾಟುವುದು, ಮರದ ಮೇಲೆ ಬೇಟೆಯಾಡಿದ ಆಹಾರವನ್ನು ತಿನ್ನುವ ದೃಶ್ಯ ಸಾಮಾನ್ಯ. ಆದರೆ ಒಟ್ಟಿಗೆ ಮೂರು ಚಿರತೆಗಳು ಕಾಣಿಸಿಕೊಂಡಿರುವ ರೋಮಾಂಚಕ ಘಟನೆಯೊಂದು ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಫಾರಿ ವೇಳೆ ಈ ಘಟನೆ ನಡೆದಿದೆ. ವನ್ಯಜೀವಿ ಛಾಯಾಗ್ರಾಹಕ ಅಬ್ದುಲ್ ಶೇಜ್ ಎಂಬವರ ಕ್ಯಾಮರಾ ಕಣ್ಣಿಗೆ ಅಪರೂಪದ ದೃಶ್ಯ ಸೆರೆಯಾಗಿದೆ. 14 ಸೆಕೆಂಡ್‌ಗಳ ಈ ವೀಡಿಯೋ ಇದಾಗಿದ್ದು, ಸಫಾರಿಗರನ್ನೇ ಚಿರತೆಗಳು ದಿಟ್ಟಿಸಿ ನೋಡುತ್ತಿರುವ ದೃಶ್ಯ ಸೆರೆಯಾಗಿದೆ.
Advertisement
Advertisement
ವೀಡಿಯೋದಲ್ಲಿ ಏನಿದೆ?: ಮರವೊಂದರ ರೆಂಬೆಯ ಮೇಲೆ 3 ಚಿರತೆಗಳು ಒಟ್ಟಿಗೆ ಕುಳಿತುಕೊಂಡಿದೆ. ಸಫಾರಿಗರನ್ನೇ ಈ 3 ಚಿರತೆಗಳು ಕೆಲವು ಸೆಕೆಂಡ್‌ಗಳ ಕಾಲ ದಿಟ್ಟಿಸಿ ನೋಡುತ್ತಿದೆ. ನಂತರದಲ್ಲಿ ಒಂದು ಚಿರತೆ ರೆಂಬೆಯಿಂದ ಕೆಳಗೆ ಇಳಿಯುತ್ತದೆ. ಮತ್ತೆರಡು ಚಿರತೆಗಳು ಆ ಚಿರತೆಯನ್ನು ನೋಡುವ ದೃಶ್ಯ ಸೆರೆಯಾಗಿದೆ. ಇದನ್ನೂ ಓದಿ: ಮಾಧುಸ್ವಾಮಿ ವಿರುದ್ಧ ಮಾತಾಡಿಲ್ಲ, ಅಧಿಕಾರಿಗಳಿಗೆ ಛೀಮಾರಿ ಹಾಕಿ ಅಂದೆ ಅಷ್ಟೇ: ಬಸವರಾಜ್
Advertisement
Advertisement
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸಫಾರಿಗರಿಗೆ ವನ್ಯಪ್ರಾಣಿಗಳು ಸಖತ್ ದರ್ಶನ ಕೊಡುತ್ತಿದೆ. ಹುಲಿ, ಆನೆ ಹಿಂಡುಗಳು ಕೂಡ ಪ್ರವಾಸಿಗರ ಕಣ್ಣಿಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿವೆ. ಇದನ್ನೂ ಓದಿ: ಜಾರ್ಖಂಡ್ ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ