ಕೀವ್: ಒಂದು ವರ್ಷ ಕಳೆದರೂ ಉಕ್ರೇನ್ (Ukraine) ಮೇಲಿನ ರಷ್ಯಾ (Russia Drone) ದಾಳಿ ಇನ್ನೂ ನಿಂತಿಲ್ಲ. ಕೀವ್‌ನ ಶಾಲೆಯೊಂದಕ್ಕೆ ರಷ್ಯಾದ (Russia) ಡ್ರೋನ್ ಅಪ್ಪಳಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ.
ಕೀವ್ (Kyiv) ಮೇಲೆ ರಷ್ಯಾ ಮಂಗಳವಾರ ರಾತ್ರಿಯಿಡೀ ದಾಳಿ ನಡೆಸಿದೆ. ಈ ವೇಳೆ ಶಾಲೆಗೆ ಡ್ರೋನ್ ಅಪ್ಪಳಿಸಿತು. ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಇನ್ನೂ ನಾಲ್ಕು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ರಾಜ್ಯ ತುರ್ತು ಸೇವಾ ಘಟಕ ತಿಳಿಸಿದೆ. ಇದನ್ನೂ ಓದಿ: ಸಲಿಂಗಕಾಮಿಗಳು ಅಂತಾ ಹೇಳಿಕೊಂಡ್ರೆ ಮರಣದಂಡನೆ – ಮಸೂದೆ ಪಾಸ್ ಮಾಡಿದ ಉಗಾಂಡ
Advertisement
Advertisement
ಡ್ರೋನ್ ದಾಳಿಯಲ್ಲಿ ವಿದ್ಯಾರ್ಥಿಗಳಿದ್ದ ಎರಡು ಅಂತಸ್ತಿನ ಕಟ್ಟಡ ಹಾಗೂ ಅಧ್ಯಯನದ ಕಟ್ಟಡವೂ ಸಹ ನೆಲಸಮಗೊಂಡಿದೆ. ಡ್ರೋನ್ ಅಪ್ಪಳಿಸಿದಾಗ ಶಾಲೆಯ 300 ಚದರ ಮೀಟರ್‌ವರೆಗೂ ಬೆಂಕಿ ಆವರಿಸಿತು. ಸ್ಥಳೀಯರು ಬೆಂಕಿ ನಂದಿಸುವ ಕಾರ್ಯ ಮಾಡಿದರು.
Advertisement
ರಷ್ಯಾ ನಿಯಮಿತವಾಗಿ ಉಕ್ರೇನ್ ವಿರುದ್ಧ ಕ್ಷಿಪಣಿ, ಫಿರಂಗಿಗಳು ಮತ್ತು ಡ್ರೋನ್‌ಗಳಿಂದ ದಾಳಿ ಮಾಡುತ್ತಿದೆ. ಇದರಿಂದ ಜನತೆ ವಿದ್ಯುತ್ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಪರದಾಡುವಂತಾಗಿದೆ. ಇದನ್ನೂ ಓದಿ: ದೆಹಲಿ ಬೆನ್ನಲ್ಲೇ ಪಾಕಿಸ್ತಾನದಲ್ಲೂ ಪ್ರಬಲ ಭೂಕಂಪ – 9 ಮಂದಿ ಸಾವು
Advertisement
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 2022ರ ಫೆಬ್ರುವರಿ 24ರಂದು ಉಕ್ರೇನ್ ವಿರುದ್ಧ ಸಮರ ಸಾರಿದರು. ಎರಡೂ ದೇಶಗಳು ಅಪಾರ ಪ್ರಮಾಣದ ನಷ್ಟ ಅನುಭವಿಸಿವೆ. ಸಾವಿರಾರು ಮಂದಿ ಯುದ್ಧದಲ್ಲಿ ಮಡಿದಿದ್ದಾರೆ. ಲಕ್ಷಾಂತರ ಮಂದಿ ಮನೆ ತೊರೆದು ನಿರಾಶ್ರಿತರಾಗಿದ್ದಾರೆ. ಎರಡೂ ದೇಶಗಳು ಕೋಟ್ಯಂತರ ಡಾಲರ್ ಮೌಲ್ಯದ ನಷ್ಟಕ್ಕೆ ತುತ್ತಾಗಿವೆ.