ಕೊಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಪೂರ್ವ ಮೇದಿನಿಪುರ ಜಿಲ್ಲೆಯ ಮನೆಯೊಂದರಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡಿದ್ದು (Bomb Blast) ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ (Suvendu Adhikari) ಪೂರ್ವಜರ ನಿವಾಸದ ಬಳಿಯೇ ಈ ಸ್ಫೋಟ ಸಂಭವಿಸಿದ್ದು ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ.
Advertisement
ಟಿಎಂಸಿ (TMC) ನಾಯಕ ರಾಜ್‍ಕುಮಾರ್ ಮನ್ನಾ ಅವರ ಮನೆಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದ್ದು, ಸ್ಫೋಟದಲ್ಲಿ ಮೃತಪಟ್ಟ ಮೂವರಲ್ಲಿ ರಾಜ್‍ಕುಮಾರ್ ಮನ್ನಾ ಕೂಡ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಫೋಟದ ಹಿಂದೆ ಟಿಎಂಸಿಯ ಕೈವಾಡವಿದೆ ಎಂದು ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ಇದನ್ನೂ ಓದಿ: ಊರು ಬಿಡುವಂತೆ ರೌಡಿಗಳಿಗೆ ಸಿಸಿಬಿ ಖಡಕ್ ಸೂಚನೆ – ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ರೆ ಕ್ರಮದ ಎಚ್ಚರಿಕೆ
Advertisement
Advertisement
ಸ್ಫೋಟದಲ್ಲಿ ಸಾವನ್ನಪ್ಪಿದ ಇತರ ಇಬ್ಬರನ್ನು ಬಿಸ್ವಜಿತ್ ಗಯೆನ್, ದೇಬ್‍ಕುಮಾರ್ ಮನ್ನಾ ಎಂದು ಗುರುತಿಸಲಾಗಿದೆ. ಸ್ಥಳೀಯ ಪೊಲೀಸ್ ಮೂಲಗಳ ಪ್ರಕಾರ, ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಪಕ್ಕದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಭೂಮಿ ಫಲವತ್ತಾಗಿದ್ರೆ ಉತ್ತಮ ಬೆಳೆ – ಚಿಕ್ಕವಯಸ್ಸಿಗೆ ಮದುವೆ ಮಾಡುವಂತೆ ಹಿಂದೂಗಳಿಗೆ ಬದ್ರುದ್ದೀನ್ ಸಲಹೆ
Advertisement
ಘಟನೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಸುವೇಂದು ಅಧಿಕಾರಿ ಬಂಗಾಳದಲ್ಲಿ ಟಿಎಂಸಿ ನಾಯಕರ ಮನೆಗಳಲ್ಲಿ ವ್ಯಾಪಕವಾಗಿ ಬಾಂಬ್ ಉತ್ಪಾದಿಸಲ್ಪಡುತ್ತವೆ ಎಂದು ವ್ಯಂಗ್ಯವಾಡಿದ್ದಾರೆ. ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಬಾಂಬ್ ತಯಾರಿಕೆಯು ಬಂಗಾಳದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಏಕೈಕ ಗುಡಿ ಕೈಗಾರಿಕೆಯಾಗಿದೆ ಎಂದು ಹೇಳಿದ್ದಾರೆ.
Wb | A blast occurred at residence of TMC booth president Rajkumar Manna in Arjun Nagar area under Bhupati Nagar PS in Purba Medinipur limits last night. Injuries reported. Party's National General Secretary Abhishek Banerjee is scheduled to hold a public rally in Contai today. pic.twitter.com/1ynqX7G6S3
— ANI (@ANI) December 3, 2022
ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಅವರ ಮೇಲ್ವಿಚಾರಣೆಯಲ್ಲಿ ಇದೆಲ್ಲವೂ ನಿರ್ಭಯದಿಂದ ನಡೆಯುತ್ತದೆ. ಈ ಬಾಂಬ್‍ಗಳನ್ನು ಯಾವುದಕ್ಕೆ ಬಳಸುತ್ತಾರೆ? ಟಾರ್ಗೆಟ್ ಯಾರು ಎಂಬುದು ಪ್ರಶ್ನೆ ಎಂದು ಮಾಳವಿಯಾ ಟ್ವೀಟ್ ಮಾಡಿದ್ದಾರೆ.
3 Dead & 2 others grievously injured as TMC Leader's house blows up in explosion at Bhupatinagar, Bhagabanpur ii Block, Purba Medinipur District.
TMC leader Rajkumar Manna was making bombs at his home when this high intensity explosion happened.
I demand @NIA_India
Investigation. pic.twitter.com/yaEcOlXAmT
— Suvendu Adhikari • শুভেন্দু অধিকারী (@SuvenduWB) December 3, 2022
ತೃಣಮೂಲ ಕಾಂಗ್ರೆಸ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ವಕ್ತಾರ ಕುನಾಲ್ ಘೋಷ್ ಅವರು ಆರೋಪಗಳನ್ನು ನಿರಾಕರಿಸಿದ್ದು, ಅಭಿಷೇಕ್ ಬ್ಯಾನರ್ಜಿ ಅವರ ರ‍್ಯಾಲಿಗಿಂತ ಮೊದಲು ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ನಡೆಸಿದ ಈ ಸ್ಫೋಟಕ್ಕೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹೊಣೆಗಾರರು ಎಂದು ಹೇಳಿದ್ದಾರೆ.