ಪತ್ನಿಯ ಚಿತಾಭಸ್ಮ ಬಿಟ್ಟು ಮನೆಗೆ ಸೇರುವ ಮುನ್ನವೇ ಪತಿಯೂ ಪ್ರಾಣಬಿಟ್ಟ

Public TV
1 Min Read
Pune Hoarding fall 1

– ಬೃಹತ್ ಜಾಹಿರಾತು ಫಲಕ ಬಿದ್ದು 3 ಸಾವು, ಐವರಿಗೆ ಗಂಭೀರ ಗಾಯ

ಮುಂಬೈ: ಬೃಹತ್ ಜಾಹಿರಾತು ಫಲಕವೊಂದು ಬಿದ್ದು, ಪತ್ನಿಯ ಚಿತಾಭಸ್ಮ ಬಿಟ್ಟು ಮನೆಗೆ ಬರುತ್ತಿದ್ದ ಪತಿ ಸೇರಿದಂತೆ ಒಟ್ಟು ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಪತ್ನಿಯ ಚಿತಾಭಸ್ಮ ಬಿಟ್ಟು ಬರುತ್ತಿದ್ದ ಶಿವಾಜಿ ಪರದೇಶಿ (40) ಸೇರಿದಂತೆ ಶಾಮ್‍ರಾವ್ ಕಾಸರ್ (70) ಹಾಗೂ ಶಾಮ್‍ರಾವ್ ದೋತ್ರೆ (48) ಮೃತ ದುರ್ದೈವಿಗಳು. ಈ ಅವಘಡದಲ್ಲಿ ಐವರಿಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಆಗಿದ್ದು ಏನು?:
ಪುಣೆಯ ರೈಲ್ವೇ ನಿಲ್ದಾಣದ ಸಮೀಪದ ಸಿಗ್ನಲ್‍ನಲ್ಲಿ ವಾಹಗಳು ನಿಂತಿದ್ದವು. ಈ ವೇಳೆ ಪಕ್ಕದಲ್ಲಿಯೇ ಇದ್ದ ಬೃಹತ್ ಜಾಹಿರಾತು ಫಲಕ ವಾಹನಗಳ ಮೇಲೆ ಬಿದ್ದಿದೆ. ಫಲಕ ಬಿದ್ದ ತೀವ್ರತೆಗೆ ವಾಹನದಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದು, ಎರಡು ಆಟೋಗಳು ಜಖಂಗೊಂಡಿವೆ.

ಸುಮಾರು ದಿನಗಳಿಂದ ಜಾಹಿರಾತು ಫಲಕವನ್ನು ದುರಸ್ತಿಗೊಳಿಸದೆ ಹಾಗೆ ಬಿಡಲಾಗಿತ್ತು. ಹೀಗಾಗಿ ಈ ಅವಘಡ ಸಂಭವಿಸಿದ್ದು, ಅದರ ಗುತ್ತಿಗೆದಾರರು ಹಾಗೂ ಕೆಲಸಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅದೃಷ್ಟವಶಾತ್ ಎಂದಿನಂತೆ ಟ್ರಾಫಿಕ್ ಹೆಚ್ಚಾಗಿರಲಿಲ್ಲ. ಹೀಗಾಗಿ ಭಾರೀ ಅನಾಹುತ ತಪ್ಪಿದೆ ಎಂದು ಪೊಲೀಸ್ ಉಪಆಯುಕ್ತ ಬಿ.ಸಿಂಗ್ ತಿಳಿಸಿದ್ದಾರೆ.

ರೈಲ್ವೇ ಇಲಾಖೆಯು ಕಳೆದ ಕೆಲವು ವರ್ಷಗಳಿಂದ ಜಾಹಿರಾತು ಎಜೆನ್ಸಿಗಳಿಗೆ ಫಲಕಗಳನ್ನು ಗುತ್ತಿಗೆ ನೀಡಿತ್ತು. ಆದರೆ ಅವರು ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರಿದ್ದ ಪರಿಣಾಮ ಅವಘಡ ಸಂಭವಿಸಿದೆ. ಈ ಕುರಿತು ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪುಣೆ ವಿಭಾಗೀಯ ರೈಲ್ವೇ ಮಾನೇಜರ್ ಮಿಲಿಂದ್ ಡಿಯೋಸ್ಕರ್ ಹೇಳಿದ್ದಾರೆ.

ಇನ್ನು ಮುಂದೆ ಮುಂಜಾಗ್ರತ ಕ್ರಮವಾಗಿ ಜಾಹಿರಾತು ಫಲಕಗಳ ನಿರ್ವಹಣೆ ಮಾಡದ ಏಜೆನ್ಸಿಗಳ ಪರವಾನಿಗೆ ರದ್ದು ಮಾಡುತ್ತೇವೆ. ಜೊತೆಗೆ ಅವಘಡದಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರ ಹಾಗೂ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆಸ್ಪತ್ರೆಯ ವೆಚ್ಚ ಪಾವತಿಸುತ್ತೇವೆ ಎಂದು ಮಿಲಿಂದರ್ ಭರವಸೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *