ಜೆರುಸಲೇಂ: ಹಮಾಸ್ ಮೂವರು ಇಸ್ರೇಲಿ (Israel) ಮಹಿಳಾ ಒತ್ತೆಯಾಳುಗಳನ್ನು (Hostages) ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿಗೆ ಹಸ್ತಾಂತರಿಸಿದ್ದು, ಮೂವರು ಒತ್ತೆಯಾಳುಗಳು ತಾಯ್ನಾಡಿಗೆ ತಲುಪಿದ್ದಾರೆ. ಇದು ಗಾಜಾ ಕದನ (Gaza War) ವಿರಾಮದ ಮೊದಲ ಹೆಜ್ಜೆಯಾಗಿದೆ ಎಂದು ಇಸ್ರೇಲಿ ರಕ್ಷಣಾ ಪಡೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಬಿಡುಗಡೆಯಾದ ಮೂವರು ಒತ್ತೆಯಾಳುಗಳು ತನ್ನ ಸೈನಿಕರೊಂದಿಗೆ ದೇಶದ ಭೂಪ್ರದೇಶವನ್ನು ಪ್ರವೇಶಿಸಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಭಾನುವಾರ ತಿಳಿಸಿದೆ. ಇದನ್ನೂ ಓದಿ: ʻಇಂಡಿಯನ್ ಸ್ಟೇಟ್ʼ ಹೇಳಿಕೆ – ವಿಪಕ್ಷ ನಾಯಕ ರಾಗಾ ವಿರುದ್ಧ ಎಫ್‌ಐಆರ್
‘ಸ್ವಲ್ಪ ಸಮಯದ ಹಿಂದೆ, ಬಿಡುಗಡೆಯಾದ ಒತ್ತೆಯಾಳುಗಳು ಐಡಿಎಫ್ (ಮಿಲಿಟರಿ) ಮತ್ತು ಐಎಸ್‌ಎ (ಭದ್ರತಾ ಸಂಸ್ಥೆ) ಪಡೆಗಳೊಂದಿಗೆ ಗಡಿಯನ್ನು ದಾಟಿ ಇಸ್ರೇಲ್‌ನ ಭೂಪ್ರದೇಶಕ್ಕೆ ಬಂದರು. ಬಿಡುಗಡೆಯಾದ ಒತ್ತೆಯಾಳುಗಳು ಪ್ರಸ್ತುತ ದಕ್ಷಿಣ ಇಸ್ರೇಲ್‌ನ ಆರಂಭಿಕ ಸ್ವಾಗತ ಕೇಂದ್ರಕ್ಕೆ ಹೋಗುತ್ತಿದ್ದಾರೆ. ಅಲ್ಲಿ ಅವರು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗೆ ಒಳಗಾಗಲಿದ್ದಾರೆ’ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಹೃದಯಾಘಾತದಿಂದ 18ರ ವಿದ್ಯಾರ್ಥಿನಿ ಸಾವು
ಒತ್ತೆಯಾಳುಗಳು ನಮ್ಮ ವಶದಲ್ಲಿದ್ದಾರೆ. ಅವರು ತಮ್ಮ ತಮ್ಮ ಮನೆಗೆ ತೆರಳುತ್ತಿದ್ದಾರೆ ಎಂದು ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಅವರು ದೂರದರ್ಶನದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ
ನಮ್ಮ ಹೃದಯಗಳು ಈಗ ಅಮಾನವೀಯ ಸ್ಥಿತಿಯಲ್ಲಿರುವ ಎಲ್ಲ ಒತ್ತೆಯಾಳುಗಳ ಜೊತೆಗಿವೆ. ಉಳಿದ ಒತ್ತೆಯಾಳುಗಳ ಮರಳುವಿಕೆಗಾಗಿ ನಾವು ಕಾಯುತ್ತಿದ್ದೇವೆ ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ: ‘ಪಬ್ಲಿಕ್ ಟಿವಿ’ ವರದಿಗಾರ ಕೆ.ಪಿ ನಾಗರಾಜ್‌ಗೆ ರಾಜ್ಯ ಪ್ರಶಸ್ತಿ
15 ತಿಂಗಳ ಸುದೀರ್ಘ ಯುದ್ಧದ ನಂತರ ಮೊದಲ ಬಾರಿಗೆ ಒತ್ತೆಯಾಳುಗಳ ವಿನಿಮಯವಾಗಿದೆ. ನಂತರ 90 ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಇಸ್ರೇಲ್ ಬಂಧನದಿಂದ ಬಿಡುಗಡೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಮುಂದಿನ ಏಳು ದಿನಗಳಲ್ಲಿ ಹಮಾಸ್ ನಾಲ್ಕು ಇತರ ಮಹಿಳಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಇಸ್ರೇಲ್ ಹೇಳಿದೆ. ಇದನ್ನೂ ಓದಿ: Kodagu | ಹುಲಿ ದಾಳಿಗೆ ಎರಡು ಹಸುಗಳು ಬಲಿ