Connect with us

Latest

6 ರಾಜ್ಯಗಳ ಪೊಲೀಸರ ಜಂಟಿ ಕಾರ್ಯಾಚರಣೆ- 3 ಶಂಕಿತ ಐಸಿಸ್ ಉಗ್ರರ ಬಂಧನ

Published

on

ನವದೆಹಲಿ: ಉತ್ತರಪ್ರದೇಶದ ಉಗ್ರ ನಿಗ್ರಹ ದಳ ಹಾಗೂ ದೆಹಲಿ ಪೊಲೀಸ್ ವಿಶೇಷ ಘಟಕ ಮೂವರು ಶಂಕಿತ ಉಗ್ರರನ್ನು ಬಂಧಿಸಿದೆ.

6 ರಾಜ್ಯಗಳ ಪೊಲೀಸರ ನೆರವಿನಿಂದ ಉತ್ತರಪ್ರದೇಶದ ಉಗ್ರ ನಿಗ್ರಹ ದಳ ಮುಂಬೈ, ಲುಧಿಯಾನಾ ಮತ್ತು ಬಿಜನೂರ್‍ನಲ್ಲಿ ಈ ಮೂವರು ಶಂಕಿತ ಐಸಿಸ್ ಉಗ್ರರರನ್ನ ಬಂಧಿಸಿದೆ. ಮಹಾರಾಷ್ಟ್ರದ ಮುಂಬೈ, ಪಂಜಾಬಿನ ಜಲಂಧರ್, ಬಿಹಾರದ ನರ್ಕಾಟಿಯಾಗಂಜ್, ಉತ್ತರಪ್ರದೇಶದ ಬಿಜನೂರ್ ಹಾಗೂ ಮುಜಫರ್‍ನಗರಗಳಲ್ಲಿ ಹುಡುಕಾಟ ನಡೆದಿತ್ತು.

ಉಗ್ರ ನಿಗ್ರಹ ದಳ ಮೂಲಗಳ ಮಾಹಿತಿಯ ಪ್ರಕಾರ ಮುಂಬೈನ ಮುಂಬ್ರಾದಲ್ಲಿ ಬಂಧಿಸಲಾದ 26 ವರ್ಷದ ಆರೋಪಿ ಮಹಾರಾಷ್ಟ್ರದ ಐಸಿಸ್ ಉದ್ಯೋಗಿ ಎನ್ನಲಾಗಿದೆ. ಈತನ ಬಳಿಯಿದ್ದ ಹಲವಾರು ಸಿಮ್ ಕಾರ್ಡ್‍ಗಳನ್ನ ಜಪ್ತಿ ಮಾಡಲಾಗಿದೆ.

ಉತ್ತರಪ್ರದೇಶದ ಉಗ್ರ ನಿಗ್ರಹ ದಳ, ದೆಹಲಿ ವಿಶೇಷ ಪೊಲೀಸ್ ಘಟಕ, ಅಂಧ್ರಪ್ರದೇಶದ ಸಿಐಡಿ, ಮಹಾರಾಷ್ಟ್ರ ಉಗ್ರ ನಿಗ್ರಹ ದಳ, ಬಿಹಾರ ಪೊಲೀಸರು ಹಾಗು ಪಂಜಾಬ್ ಪೊಲೀಸರು ಈ ಕಾರ್ಯಾಚರಣೆಯ ಭಾಗವಾಗಿದ್ದರು.

ಈ ಬಗ್ಗೆ ತನಿಖೆ ಮುಂದುವರೆದಿದ್ದು, ಬಂಧಿತ ಉಗ್ರರು ಸೇರಿದಂತೆ ಇತರೆ 6 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಉತ್ತರಪ್ರದೇಶದ ಎಡಿಜಿ ದಲ್ಜೀತ್ ಸಿಂಗ್ ಚೌಧರಿ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *