ವಾಷಿಂಗ್ಟನ್: ಕಾರೊಂದಕ್ಕೆ ಮತ್ತೊಂದು ವಾಹನ ಡಿಕ್ಕಿ ಹೊಡೆದ ಪರಿಣಾಮ ಭಾರತದ (India) ಮೂವರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಯುನೈಟೆಡ್ ಸ್ಟೇಟ್ಸ್‌ನ ಪಶ್ವಿಮ ಮ್ಯಾಸಚೂಸೆಟ್ಸ್‌ನಲ್ಲಿ (western Massachusetts) ನಡೆದಿದೆ.
Advertisement
ಮೃತರನ್ನು ಪ್ರೇಮ್ ಕುಮಾರ್ ರೆಡ್ಡಿ ಗೋಡಾ (27), ಪಾವನಿ ಗುಲ್ಲಪಲ್ಲಿ (22) ಮತ್ತು ಸಾಯಿ ನರಸಿಂಹ ಪಟಂಶೆಟ್ಟಿ (22) ಎಂದು ಗುರುತಿಸಲಾಗಿದೆ. ಎರಡು ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಉಳಿದ ಐವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮ್ಯಾಸಚೂಸೆಟ್ಸ್ ರಾಜ್ಯ ಮತ್ತು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದು ಬಿಜೆಪಿ ಮೇಲೆ ಪರಿಣಾಮ ಬೀರಲ್ಲ: ನಿರಾಣಿ
Advertisement
Advertisement
ಗುರುವಾರ ಮುಂಜಾನೆ 5:30ರ ವೇಳೆಗೆ ಈ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಮನೋಜ್ ರೆಡ್ಡಿ ದೊಂಡ, ಶ್ರೀಧರ್ ರೆಡ್ಡಿ ಚಿಂತಕುಂಟಾ, ವಿಜಿತ್ ರೆಡ್ಡಿ ಗುಮ್ಮಲ ಮತ್ತು ಹಿಮಾ ಐಶ್ವರ್ಯ ಸಿದ್ದಿರೆಡ್ಡಿ ಅವರನ್ನು ಚಿಕಿತ್ಸೆಗಾಗಿ ಬರ್ಕ್‍ಶೈರ್ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಕಾರಿನಲ್ಲಿದ್ದವರನ್ನು ಅಂತಾರಾಷ್ಟ್ರೀಯ ಕಾಲೇಜು ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದ್ದು, ಆರು ಮಂದಿಯನ್ನು ನ್ಯೂ ಹೆವನ್ ವಿಶ್ವವಿದ್ಯಾಲಯದಲ್ಲಿ (University of New Haven) ಮತ್ತು ಒಬ್ಬರು ಸೇಕ್ರೆಡ್ ಹಾರ್ಟ್ ವಿಶ್ವವಿದ್ಯಾಲಯದಲ್ಲಿ (Sacred Heart University) ಓದುತ್ತಿದ್ದಾರೆ. ಇನ್ನೂ ವಾಹನದ ಚಾಲಕನನ್ನು 46 ವರ್ಷದ ಅರ್ಮಾಂಡೋ ಬೌಟಿಸ್ಟಾ-ಕ್ರೂಜ್‍ರನ್ನು ಚಿಕಿತ್ಸೆಗಾಗಿ ಫೇರ್‌ವ್ಯೂ ವೈದ್ಯಕೀಯ ಕೇಂದ್ರಕ್ಕೆ ಸಾಗಿಸಲಾಗಿದೆ. ಇದನ್ನೂ ಓದಿ: ಅಪ್ಪು ಕನಸಿನ ಗಂಧದಗುಡಿ ದರ್ಶನ- ಥಿಯೇಟರ್ ಅಂಗಳದಲ್ಲಿ ಅಭಿಮಾನಿಗಳ ಸಂಭ್ರಮ