ಬೆಂಗಳೂರು: ವಿಶ್ವದ ಟಾಪ್ 10 ಅಗ್ಗದ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 5ನೇ ಸ್ಥಾನ ಸಿಕ್ಕಿದೆ.
ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್, ಕಾಸ್ಟ್ ಆಫ್ ಲಿವಿಂಗ್ ಇಂಡೆಕ್ಸ್ -2018ರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬೆಂಗಳೂರು ವಿಶ್ವದ 5ನೇ ಅಗ್ಗದ ನಗರವೆಂದು ತಿಳಿಸಿದೆ.
ಪಟ್ಟಿಯಲ್ಲಿ ಚೆನ್ನೈ 8ನೇ ಸ್ಥಾನವನ್ನು ಪಡೆದುಕೊಂಡಿದ್ದು, ನವದೆಹಲಿಗೆ 10ನೇ ಸ್ಥಾನ ಸಿಕ್ಕಿದೆ. ಈ ಪಟ್ಟಿಯಲ್ಲಿ ಏಷ್ಯಾ, ವಿಶೇಷವಾಗಿ ಭಾರತ ಹಾಗೂ ಪಾಕಿಸ್ತಾನದ ನಗರಗಳು ಹಣ ಮತ್ತು ಸಾಂಪ್ರದಾಯಿಕವಾದ ಉತ್ತಮ ಮೌಲ್ಯವನ್ನು ಒದಗಿಸುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ.
ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ ಸಿಂಗಾಪುರ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಎರಡನೇ ಸ್ಥಾನವನ್ನು ಫ್ರಾನ್ಸ್ ನ ಪ್ಯಾರಿಸ್ ನಗರ ಪಡೆದುಕೊಂಡಿದೆ. ಸ್ವಿಜರ್ಲ್ಯಾಂಡ್‍ನ ಜ್ಯುರಿಚ್, ಹಾಂಕಾಂಗ್, ನಾರ್ವೆಯ ಓಸ್ಲೋ ಕ್ರಮವಾಗಿ ಮೂರು, ನಾಲ್ಕು, ಐದನೇ ಸ್ಥಾನವನ್ನು ಪಡೆದುಕೊಂಡಿದೆ.
ವಿಶ್ವದ ಅಗ್ಗದ ನಗರಗಳ ಪೈಕಿ ಮೊದಲ ಸ್ಥಾನದಲ್ಲಿ ಸಿರಿಯಾದ ಡಮಾಸ್ಕಸ್, ವೆನಿಜುವೆಲಾದ ಕ್ಯಾರಕಸ್‍ಗೆ ಎರಡನೇ ಸ್ಥಾನ ಸಿಕ್ಕಿದೆ. ಕಜಕಿಸ್ತಾನದ ಅಲ್ಮಾಟಿ, ನೈಜೀರಿಯಾ ಲಾಗೋಸ್‍ಗೆ ಮೂರು ಮತ್ತು ನಾಲ್ಕನೇಯ ಸ್ಥಾನ ಸಿಕ್ಕಿದೆ.