LatestMain PostNational

ಕಿನ್ನೌರ್‌ನಲ್ಲಿ ಭಾರೀ ಹಿಮಪಾತಕ್ಕೆ ಮೂವರು ಬಲಿ – 10 ಮಂದಿಯ ರಕ್ಷಣೆ

ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಭಾರೀ ಹಿಮಪಾತದಿಂದ ಮೂವರು ಪಾದಯಾತ್ರಿಕರು ಸಾವನ್ನಪ್ಪಿದ್ದಾರೆ.

ಈ ಮೂವರು ಶಿಮ್ಲಾದ ರೋಹ್ರುದಲ್ಲಿರುವ ಜಂಗ್ಲಿಖ್‍ನಿಂದ ಸಾಂಗ್ಲಾದ ಕಿನ್ನೌರ್‍ಗೆ ತೆರಳುತ್ತಿದ್ದರು. ಕಿನ್ನೌರ್‌ನಲ್ಲಿ ಬುರಾನ್ ಪಾಸ್ ಬಳಿ ಇರುವ ಸಮುದ್ರ ಮಟ್ಟದಿಂದ 4,696 ಮೀಟರ್ ಎತ್ತರದಲ್ಲಿ ಸಿಲುಕಿಕೊಂಡಿದ್ದ 10 ಮಂದಿಯನ್ನು ಇಂಡೋ-ಟಿಬೆಟಿಯನ್ ಗಡಿಯ ಪೊಲೀಸರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಇಷ್ಟು ಮಂದಿ ಬುರಾನ್ ಪಾಸ್‍ಗೆ ತಲುಪುವಲ್ಲಿ ಯಶಸ್ವಿಯಾದರು. ಆದರೆ ಈ ಪ್ರದೇಶದಲ್ಲಿ ಭಾರೀ ಹಿಮಪಾತದಿಂದಾಗಿ ಇದರಿಂದ ಆಚೆಗೆ ಹೋಗಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಡ್ರಗ್ಸ್ ಕೇಸ್ – ಶಾರೂಖ್ ನಿವಾಸದ ಮೇಲೆ ಎನ್‍ಸಿಬಿ ದಾಳಿ

ಮೂವರು ಪಾದಯಾತ್ರಿಕರ ಮೃತ ದೇಹಗಳನ್ನು ನಾಲ್ಕು ಅಡಿ ಹಿಮದ ಕೆಳಗೆ ಹೂಳಲಾಗಿದೆ ಎಂದು ಕಿನ್ನೌರ್‍ನ ಅಪರ ಆಯುಕ್ತ ಅಪೂರ್ವ್ ದೇವಗನ್ ತಿಳಿಸಿದ್ದಾರೆ. ಇದನ್ನೂ ಓದಿ:  ಮಕ್ಕಳಿಗೆ ಬಿಸಿಯೂಟ ನೀಡಲು ಗುಡ್ಡಗಾಡಲ್ಲಿ ನಡೆಯುವ ಶಿಕ್ಷಕ

ಬುರಾನ್ ಪಾಸ್‍ನಲ್ಲಿ ಗುಂಪೊಂದು ಸಿಕ್ಕಿ ಹಾಕಿಕೊಂಡಿರುವ ಮಾಹಿತಿ ಬಂದ ನಂತರ 10 ಪಾದಯಾತ್ರಿಕರಲ್ಲಿ ಒಂಬತ್ತು ಮಂದಿ ಮುಂಬೈನವರು ಮತ್ತು ಒಬ್ಬರು ನವದೆಹಲಿಯವರು ಎಂದು ತಿಳಿದುಬಂದಿದೆ ಎಂದು ಜಿಲ್ಲಾಡಳಿತದ ಅಧಿಕಾರಿ ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button