ತಿರುವನಂತಪುರಂ: ಕೇರಳದ ವಲಿಯತುರಾ ಪ್ರದೇಶದ ಕಾನ್ವೆಂಟ್ ಹಾಸ್ಟೆಲ್‌ನಲ್ಲಿ ಅಪ್ರಾಪ್ತೆಯರಿಗೆ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮವಾಗಿ ಹಾಸ್ಟೆಲ್ ಪ್ರವೇಶಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಮರ್ಸನ್, ಅರುಣ್ ಮತ್ತು ರೆಂಜಿತ್ ಆರೋಪಿಗಳನ್ನು ಬಂಧಿಸಿರುವ ಕಡಿನಾಂಕುಲಂ ಪೊಲೀಸರು ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಚಿಕ್ಕಮ್ಮನ ಮಗಳು, ಸ್ವಂತ ಅಜ್ಜಿಯ ಮೇಲೆಯೇ ಅತ್ಯಾಚಾರ – ಇಬ್ಬರು ಸಹೋದರರು ಅರೆಸ್ಟ್
ಪೊಲೀಸರು ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಆರೋಪಿಗಳು ಅಕ್ರಮವಾಗಿ ಕಾನ್ವೆಂಟ್ ಹಾಸ್ಟೆಲ್ ಪ್ರವೇಶಿಸುತ್ತಿರುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಅಪರಾಧ ಬೆಳಕಿಗೆ ಬಂದಿದೆ. ಹಾಸ್ಟೆಲ್ ಬಾಲಕಿಯರ ಹೇಳಿಕೆಯಂತೆ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕೃತ್ಯದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ದೇಶದ್ರೋಹದ ಪಾಠ ಮಾಡಿದ್ರೆ ನಾವೇ ಮದರಸಾ ಬ್ಯಾನ್ ಮಾಡ್ತೀವಿ – ವಕ್ಫ್ ಅಧ್ಯಕ್ಷ
ಘಟನೆ ನಡೆದಿದ್ದು ಹೇಗೆ?
ಆರೋಪಿಗಳಲ್ಲಿ ಒಬ್ಬ ಕಾನ್ವೆಂಟ್ ಹುಡುಗಿಯೊಬ್ಬಳ ಸ್ನೇಹಿತನಾಗಿದ್ದ. ಇಬ್ಬರೂ ಆಗಾಗ್ಗೆ ಹಾಸ್ಟೆಲ್‌ನಲ್ಲಿ ರಹಸ್ಯವಾಗಿ ಭೇಟಿಯಾಗುತ್ತಿದ್ದರು. ನಂತರ ತನ್ನ ಇಬ್ಬರು ಸ್ನೇಹಿತರನ್ನು ಹಾಸ್ಟೆಲ್‌ಗೆ ಕರೆದುಕೊಂಡು ಹೋಗಿದ್ದಾನೆ. ಆರಂಭದಲ್ಲಿ ಮೂವರು ಇತರ ಹುಡುಗಿಯರೊಂದಿಗೆ ಸ್ನೇಹ ಬೆಳೆಸಿದ್ದಾರೆ. ನಂತರ ಹಾಸ್ಟೆಲ್‌ಗೆ ಮದ್ಯ ತರಲು ಪ್ರಾರಂಭಿಸಿದ್ದರು. ಬಾಲಕಿಯರಿಗೂ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಿರುವುದಾಗಿ ಕಡಿನಾಂಕುಲಂ ಪೊಲೀಸರು ತಿಳಿಸಿದ್ದಾರೆ.