– 200 ಯೂನಿಟ್‍ಗೆ ನೋಂದಣಿ ಕಡ್ಡಾಯ ಸಾಧ್ಯತೆ
– ಬಸ್ ಪ್ರಯಾಣಕ್ಕೆ ಪಿಂಕ್ ಪಾಸ್ ನಿರೀಕ್ಷೆ
ಬೆಂಗಳೂರು: ರಾಜ್ಯದಲ್ಲೀಗ ಶುಭ ಶುಕ್ರವಾರದ್ದೇ ಚರ್ಚೆ. ಚುನಾವಣೆ ವೇಳೆ ಕಾಂಗ್ರೆಸ್ ಕೊಟ್ಟ ಮಾತಿನಂತೆ ಗ್ಯಾರಂಟಿಗಳ (Congress Guarantee) ಜಾರಿಗೆ ಆದೇಶ ಹೊರಡಿಸುತ್ತಾ? ಜನತೆಗೆ `ಪಂಚ’ ಕಜ್ಜಾಯ ಕೊಡುತ್ತಾ ಎಂಬ ಕುತೂಹಲ ಹೆಚ್ಚಾಗಿದೆ. ಶುಕ್ರವಾರ ಸಿದ್ದರಾಮಯ್ಯ (Siddaramaiah) ಸರ್ಕಾರದ ಬಹುನಿರೀಕ್ಷಿತ, ಹೈವೋಲ್ಟೇಜ್ ಸಚಿವ ಸಂಪುಟ ಸಭೆ ನಡೆಯಲಿದೆ. ಸಿದ್ದರಾಮಯ್ಯ ಸರ್ಕಾರದ ನಿರ್ಧಾರ ಕೇವಲ ಕರ್ನಾಟಕ ಮಾತ್ರವಲ್ಲ, ದೇಶದ ರಾಜಕೀಯದಲ್ಲೂ ಕೂಡ ಆಸಕ್ತಿಯನ್ನೇ ಹುಟ್ಟುಹಾಕಿದೆ.
Advertisement
ಕಾಂಗ್ರೆಸ್ ಕೊಟ್ಟಿರುವ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಶಕ್ತಿ ಗ್ಯಾರಂಟಿಗಳು ಏಕಕಾಲಕ್ಕೇ ಅನುಷ್ಠಾನಕ್ಕೆ ಬರುತ್ತಾ? ಅಥವಾ ಆರ್ಥಿಕತೆ ಲಭ್ಯತೆಗೆ ಅನುಸಾರ ಜಾರಿಯಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. 13 ಬಜೆಟ್ ಮಂಡಿಸಿ ಮತ್ತೆ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿರುವ ಸಿದ್ದರಾಮಯ್ಯ ಆಡಳಿತ ವೈಖರಿಯನ್ನೂ ಓರೆಗಚ್ಚುವ ಸವಾಲು ಎದುರಾಗಿದೆ. ಆದರೆ ಪಬ್ಲಿಕ್ ಟಿವಿಯ ಮೂಲಗಳ ಪ್ರಕಾರ 5 ಗ್ಯಾರಂಟಿಗಳಲ್ಲಿ ಮೊದಲ ಹಂತದಲ್ಲಿ 3 ಗ್ಯಾರಂಟಿಗಳು ಮಾತ್ರ ಜಾರಿಗೆ ಬರುವ ಸಾಧ್ಯತೆಯಿದೆ.
Advertisement
Advertisement
ಉಚಿತ ವಿದ್ಯುತ್ ಗ್ಯಾರಂಟಿ
200 ಯೂನಿಟ್ ಒಳಗೆ ಮಾಸಿಕ ವಿದ್ಯುತ್ ಬಳಕೆ ಉಚಿತವಾಗಿದ್ದರೂ ಬಿಲ್ ಮೊತ್ತ ಪಾವತಿಸುವುದು ಕಡ್ಡಾಯ. ಯೋಜನೆಯ ಫಲಾನುಭವಿಯಾಗಲು ನೋಂದಣಿ ಕಡ್ಡಾಯವಾಗಲಿದ್ದು ಫಲಾನುಭವಿಗಳ ಖಾತೆಗೆ ಹಣ ನೇರ ವರ್ಗಾವಣೆಯಾಗುವ (DBT) ಸಾಧ್ಯತೆಯಿದೆ. ಇದನ್ನೂ ಓದಿ: ಮೇ ತಿಂಗಳಿನಲ್ಲಿ 1.57 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಕರ್ನಾಟಕದ ಪಾಲು ಎಷ್ಟು?
Advertisement
ಬಾಡಿಗೆದಾರರಾಗಿದ್ದರೆ ಬೆಸ್ಕಾಂ ಕಚೇರಿಗೆ ಬಂದು ಆಧಾರ್ ಜೊತೆಗೆ ಅಕೌಂಟ್ ಮಾಹಿತಿ ಕೊಡಬೇಕು. ಯೋಜನೆಯಡಿ 2.14 ಕೋಟಿ ಫಲಾನುಭವಿಗಳಿಗೆ ಲಾಭ ಸಿಗುವ ಸಾಧ್ಯತೆ ಇದ್ದು ಒಟ್ಟು 12,038 ಕೋಟಿ ರೂ. ವಾರ್ಷಿಕ ವೆಚ್ಚವಾಗುವ ಸಾಧ್ಯತೆಯಿದೆ. ಈ ಯೋಜನೆ ಜೂನ್‍ನಿಂದಲೇ ಜಾರಿಯಾಗುವ ನಿರೀಕ್ಷೆಯಿದೆ.
ಮಹಿಳೆಯರಿಗೆ ಉಚಿತ ಸಾರಿಗೆ
ಉಚಿತ ಪ್ರಯಾಣಕ್ಕೆ ಇಂತಿಷ್ಟು ಕಿ.ಮೀ. ಮಿತಿ ಹೇರಬಹುದು. ಮಹಿಳೆಯರಿಗೆ ಪಿಂಕ್ ಬಸ್ ಪಾಸ್ ವಿತರಣೆ ಸಾಧ್ಯತೆಯಿದ್ದು ಎಸಿ ಹೊರತಾದ ಬಸ್‍ಗಳಲ್ಲಿ ಮಾತ್ರ ಸಂಚಾರಕ್ಕೆ ಅವಕಾಶವಿರಲಿದೆ. ಉಚಿತ ಬಸ್‍ಗಳ ಪ್ರತ್ಯೇಕಿಸಿ ಆಪರೇಷನ್ ಮಾಡುವ ಆಲೋಚನೆ ಬಂದಿದೆ ಎನ್ನಲಾಗುತ್ತಿದೆ. ನಿಗದಿತ ಗುರುತಿನ ಚೀಟಿ ಮೂಲಕ ರಾಜ್ಯದ ಮಹಿಳಾ ಪ್ರಯಾಣಿಕರನ್ನ ಗುರುತಿಸಲು ಸರ್ಕಾರ ಮುಂದಾಗಿದೆ. ಸರ್ಕಾರಿ ಉದ್ಯೋಗ ಸೇರಿದಂತೆ ನಿಗದಿತ ಉದ್ಯೋಗಿಗಳನ್ನು ಹೊರಗಿಡುವ ಸಾಧ್ಯತೆಯಿದೆ.
ಈ ಯೋಜನೆಯಿಂದ 3.5 ಕೋಟಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭಾಗ್ಯ ಸಿಗಲಿದ್ದು ವಾರ್ಷಿಕ 3,600 ಕೋಟಿ ರೂ. ಒಟ್ಟು ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಜೂನ್‍ನಿಂದಲೇ ಜಾರಿಯಾಗುವ ಸಾಧ್ಯತೆಯಿದೆ.
10 ಕೆಜಿ ಉಚಿತ ಅಕ್ಕಿ
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ನೀಡಲಾಗುತ್ತದೆ. ವಾರ್ಷಿಕ 8-10 ಸಾವಿರ ಕೋಟಿ ರೂ ವೆಚ್ಚವಾಗುವ ಸಾಧ್ಯತೆಯಿದೆ. ಹಳೆಯ ಮಾನದಂಡಗಳನ್ನೇ ಪರಿಷ್ಕರಿಸಿ ಜೂನ್‌ನಿಂದಲೇ ಯೋಜನೆ ಜಾರಿಯಾಗುವ ಸಾಧ್ಯತೆಯಿದೆ. 1.27 ಕೋಟಿ ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಈ ಯೋಜನೆಯ ಲಾಭ ಸಿಗಬಹುದು ಎಂದು ಅಂದಾಜಿಸಲಾಗಿದೆ.