ಬೆಂಗಳೂರು: ಈ ವಾರ ವರಮಹಾಲಕ್ಷ್ಮಿಯ ಆರ್ಶೀವಾದದ ಜೊತೆ ಎಲ್ಲರ ಚಪ್ಪಾಳೆ-ಶಿಳ್ಳೆ ಪಡೆಯೋದಕ್ಕೆ 3 ಸಿನಿಮಾಗಳು ಥಿಯೇಟರ್ ಗೆ ಎಂಟ್ರಿ ಕೊಡುತ್ತಿವೆ.
ಇಂದು ನಿಮ್ಮ ಮುಂದೆ 3 ಹೊಸ ಸಿನಿಮಾಗಳು ಬರಲಿವೆ. ಕಿರಿಕ್ ಪಾರ್ಟಿ ಸಾರಥಿ ರಿಷಬ್ ಶೆಟ್ಟಿ ಅವರ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ’ ಕಥೆ ಹೇಳೋಕೆ ಬರುತ್ತಿದ್ದಾರೆ. ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಸೇರಿದಂತೆ ಹಲವು ಮಕ್ಕಳು ಬಣ್ಣ ಹಚ್ಚಿದ್ದಾರೆ. ಗಡಿನಾಡ ಕನ್ನಡ ಶಾಲೆಗಳ ಸ್ಥತಿ-ಗತಿಗಳ ಜೊತೆ ಆ ಮಕ್ಕಳ ಬದುಕು ಬವಣೆ ಹೇಳಲು ಚಿತ್ರತಂಡ ಸಜ್ಜಾಗಿದೆ. ಬೆಂಗಳೂರಿನ ಸಂತೋಷ್ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ ಗ್ರಾಂಡ್ ರಿಲೀಸ್ ಆಗುತ್ತಿದೆ.
ಕಾಸರಗೊಡು ಶಾಲೆಯ ಮಕ್ಕಳ ಜೊತೆ `ರಾಮ ರಾಮಾ ರೇ’ ಸತ್ಯಪ್ರಕಾಶ್ ಸಾರಥ್ಯದ `ಒಂದಲ್ಲ ಎರಡಲ್ಲಾ’ ಸಿನಿಮಾ ಬಿಡುಗಡೆಯಾಗುತ್ತಿದೆ. ಹೆಬ್ಬುಲಿ ನಿರ್ಮಾಪಕರು ಈ ಸಿನಿಮಾಗೆ ಬಂಡವಾಳ ಹಾಕಿದ್ದು ಮಾಸ್ಟರ್ ರೋಹಿತ್, ಸಾಯಿಕೃಷ್ಣ ಕುಡ್ಲ, ಎಂ.ಕೆ ಮೃ, ಆನಂದ್ ನಿನಾಸಂ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಮನಂಜನೇಯ ಜೊತೆ ಭಾವನಾತ್ಮಕ ವಿಚಾರಗಳನ್ನ ಹೇಳಲು ಚಿತ್ರತಂಡ ಸಜ್ಜಾಗಿದೆ.
ಸೂಪರ್ ಹಿಟ್ ಸಾರಥಿ ಸಿನಿಮಾ ಆದ ಮೇಲೆ ದಿನಕರ್ ತೂಗುದೀಪ ಸಾರಥ್ಯದಲ್ಲಿ ಮೂಡಿ ಬರುತ್ತಿರೋ ಸಿನಿಮಾ ಲೈಫ್ ಜೊತೆ ಸೆಲ್ಫಿ. ದಿನಕರ್ ಮಡದಿ ಮಾನಸ ಚಿತ್ರಕ್ಕೆ ಕಥೆ ಬರೆದರೆ ಪ್ರಜ್ವಲ್ ದೇವರಾಜ್, ನೆನಪಿರಲಿ ಪ್ರೇಮ್, ಹರಿಪ್ರಿಯಾ ಲೀಡ್‍ನಲ್ಲಿ ಆ್ಯಕ್ಟ್ ಮಾಡಿದ್ದಾರೆ. ವಿ. ಹರಿಕೃಷ್ಣ ಸೆಲ್ಫಿ ಕಥೆಗೆ ಟ್ಯೂನ್ ಕಂಪೋಸ್ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv