ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್ ವಿಂಗಡಣಾ ಆಯೋಗದ ಕರಡು ಪ್ರಸ್ತಾವವನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ತಡೆಯುವುದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.
ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಮೆಹಬೂಬ ಮುಫ್ತಿ, ಓಮರ್ ಅಬ್ದುಲ್ಲಾ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಅವರು ವಾಸವಾಗಿರುವ ಶ್ರೀನಗರದ ಗುಪ್ಕರ್ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಎಲ್‌ಪಿಜಿ ಬಳಕೆದಾರರಿಗೆ ಶುಭಸುದ್ದಿ – ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 102.5 ರೂ. ಕಡಿತ
ರಾಜಕೀಯ ಮುಖಂಡರ ಮನೆಗಳ ಹೊರಗೆ ಪೊಲೀಸರು ಭದ್ರತಾ ಟ್ರಕ್‌ಗಳನ್ನು ನಿಯೋಜಿಸಿದ್ದು, ಅಲ್ಲಿಂದ ಯಾರಿಗೂ ಒಳ ಹೋಗಲು ಅಥವಾ ಹೊರ ಬರಲು ಅವಕಾಶ ನೀಡುತ್ತಿಲ್ಲ.
ಜಮ್ಮು ಪ್ರಾಂತ್ಯದಲ್ಲಿ ಆರು, ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಒಂದು ವಿಧಾನಸಭಾ ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡುವ ಕರಡು ಪ್ರಸ್ತಾವವನ್ನು ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ಗುಪ್ಕಾರ್ ಅಲಯನ್ಸ್‌ನ ನೇತೃತ್ವ ವಹಿಸಿರುವ ಫಾರೂಕ್ ಅಬ್ದುಲ್ಲಾ ಅವರು ಘೋಷಿಸಿದ್ದರು.
ಮಾಜಿ ಸಿಎಂ ಓಮರ್ ಅಬ್ದುಲ್ಲಾ ಅವರು ಫೋಟೀ ಸಹಿತ ಟ್ವೀಟ್ ಮಾಡಿದ್ದು, ತಮ್ಮ ಹಾಗೂ ತಂದೆ, ಸಹೋದರಿಯರ ಮನೆಗೆ ಬೀಗ ಹಾಕಲಾಗಿದೆ. ಗೇಟ್‌ಗಳ ಹೊರಗೆ ಭದ್ರತಾ ಟ್ರಕ್‌ಗಳನ್ನು ನಿಯೋಜಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಜನರನ್ನು ಸಜ್ಜುಗೊಳಿಸಬೇಕಾದ ಸಚಿವರು, ಶಾಸಕರಿಗೆ ಸೋಂಕು ತಗುಲಿರುವುದು ಆತಂಕಕಾರಿ: ಅಜಿತ್ ಪವಾರ್
ಕ್ಷೇತ್ರ ಪುನರ್ ವಿಂಗಡಣಾ ಆಯೋಗದ ಕರಡು ಪ್ರಸ್ತಾವವನ್ನು ರಾಜಕೀಯ ನಾಯಕರಷ್ಟೇ ಅಲ್ಲ, ಇಲ್ಲಿನ ಎಲ್ಲ ವರ್ಗದ ಜನರು ಒಪ್ಪಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷಗಳ ನಿಲುವಾಗಿದೆ.