ಹೈದರಾಬಾದ್: ಅನಕಾಪಲ್ಲಿಯ DIET ಎಂಜಿನಿಯರಿಂಗ್ ಕಾಲೇಜಿನ ಏಳು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಆಂಧ್ರಪ್ರದೇಶದ ಪುಡಿಮಡಕ ಬೀಚ್‍ನಲ್ಲಿ ನಾಪತ್ತೆಯಾಗಿದ್ದಾರೆ.
ಶುಕ್ರವಾರ ಪೊಲೀಸರು ಇಬ್ಬರು ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿದ್ದು, ಅವರಲ್ಲಿ ಪವನ್ ಕುಮಾರ್ ಎಂಬ ಯುವಕ ಶವವಾಗಿ ಪತ್ತೆಯಾಗಿದ್ದು, ಮತ್ತೋರ್ವ ತೇಜ ಅವರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ನಡೆದಂತಹ ಕೊಲೆಗಳು ರಾಜಕೀಯಕ್ಕಾಗಿ ನಡೆದಂತಹ ಕೊಲೆ: ಮಾಧುಸ್ವಾಮಿ
Advertisement
Advertisement
ಸ್ನಾನ ಮಾಡಲೆಂದು ಏಳು ಮಂದಿ ವಿದ್ಯಾರ್ಥಿಗಳು ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಜೋರಾಗಿ ಬಂದ ಅಲೆ ಅವರನ್ನು ಎಳೆದೊಯ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೀಗ ಶನಿವಾರ ರಕ್ಷಣಾ ಅಧಿಕಾರಿಗಳು ಮತ್ತಿಬ್ಬರು ವಿದ್ಯಾರ್ಥಿಗಳ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಮೃತರನ್ನು ಜಸ್ವಂತ್ ಕುಮಾರ್ ಮತ್ತು ಪೆಂಟಕೋಟ ಗಣೇಶ್ ಎಂದು ಗುರುತಿಸಲಾಗಿದೆ.
Advertisement
ಉಳಿದ ಮೂವರು ವಿದ್ಯಾರ್ಥಿಗಳಾದ ಕಂಪಾರ ಜಗದೀಶ್, ಬಯ್ಯಪುನೇನಿ ಸತೀಶ್ ಕುಮಾರ್ ಮತ್ತು ಪುಡಿ ರಾಮಚಂದು ಅವರನ್ನು ಹುಡುಕಲು ಹೆಲಿಕಾಪ್ಟರ್ ಮತ್ತು ಕೋಸ್ಟ್ ಗಾರ್ಡ್ ಬೋಟ್‍ಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ ಪ್ರಕರಣ – ಆರೋಗ್ಯ ಇಲಾಖೆಗೆ ಪತ್ರ ಬರೆದ ಡಿಹೆಚ್‍ಒ
Advertisement
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಮೃತ ವಿದ್ಯಾರ್ಥಿಗಳ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಅಗತ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.