ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಬಕ್ಸಾ ಹುಲಿ ಸಂರಕ್ಷಿತ ಅರಣ್ಯದಲ್ಲಿ (Buxa Tiger Reserve) ಗೂಡ್ಸ್ ರೈಲು (Goods Train) ಡಿಕ್ಕಿ ಹೊಡೆದ ಪರಿಣಾಮ 3 ಆನೆಗಳು (Elephants) ಸಾವನ್ನಪ್ಪಿವೆ.
ರಾಜಭಟ್ಖಾವಾ (Rajabhatkhawa) ಮತ್ತು ಕಲ್ಚಿನಿ (Kalchini) ರೈಲು ನಿಲ್ದಾಣಗಳ ನಡುವಿನ ಶಿಖಾರಿ ಗೇಟ್ ಬಳಿ ಬೆಳಗ್ಗೆ 7 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಒಂದು ಮರಿ ಮತ್ತು ಎರಡು ವಯಸ್ಕ ಆನೆಗಳು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿವೆ. ಅಲಿಪುರ್ದೌರ್ ಜಿಲ್ಲೆಯ ಹುಲಿ ಸಂರಕ್ಷಿತ ಪ್ರದೇಶದ ಪಶ್ಚಿಮ ರಾಜಭಟ್ಖಾವಾ ಶ್ರೇಣಿಯಲ್ಲಿ ಸಂಭವಿಸಿದ ಈ ಘಟನೆಯು ಭಾರತದಲ್ಲಿ ರೈಲು ಡಿಕ್ಕಿಯಿಂದ ಆನೆಗಳು ಸಾವನ್ನಪ್ಪುವ ಅನೇಕ ಸಾಮಾನ್ಯ ಘಟನೆಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ಜೂಜಾಟಕ್ಕೆ ಹಣ ಕೊಡದ ಪತ್ನಿಯ ತಲೆ ಒಡೆದು ಹತ್ಯೆ – ಆರೋಪಿ ಅರೆಸ್ಟ್
Advertisement
Advertisement
ಈ ವರ್ಷದ ಆರಂಭದಲ್ಲಿ, ಪಶ್ಚಿಮ ಬಂಗಾಳದ ಅಲಿಪುರ್ದಾರ್ ಜಿಲ್ಲೆಯ ಚಪ್ರಮರಿ ಮೀಸಲು ಅರಣ್ಯದೊಳಗೆ ರೈಲು ಹಳಿ ದಾಟಲು ಪ್ರಯತ್ನಿಸುತ್ತಿದ್ದ ಗರ್ಭಿಣಿ ಆನೆ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಭಾರತದಲ್ಲಿ ಪ್ರತಿ ವರ್ಷ ಸರಾಸರಿ 20 ಆನೆಗಳು ರೈಲು ಡಿಕ್ಕಿಯಿಂದ ಸಾಯುತ್ತವೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸುತ್ತವೆ. ರೈಲು ಅಪಘಾತಗಳು ಪಶ್ಚಿಮ ಬಂಗಾಳದಲ್ಲಿ ಅಸ್ವಾಭಾವಿಕ ಆನೆಗಳ ಸಾವಿಗೆ ಒಂದು ಕಾರಣವಾಗಿದೆ ಮತ್ತು ಅದನ್ನು ತಡೆಯಲು ಸರ್ಕಾರವು ಕಠಿಣವಾಗಿ ಪ್ರಯತ್ನಿಸುತ್ತಿದೆ. ಇದನ್ನೂ ಓದಿ: ಅಪರಿಚಿತೆಯ ಮಾತುಕೇಳಿ ವೀಡಿಯೋ ಕಾಲ್‍ನಲ್ಲಿ ನಗ್ನವಾಗಿ ಲಕ್ಷಾಂತರ ರೂ. ಕಳೆದುಕೊಂಡ!
Advertisement