ಕಠ್ಮಂಡು: ನೇಪಾಳದ (Nepal) ಕರ್ನಾಲಿ (Karnali) ಪ್ರಾಂತ್ಯದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ (Avalanche) ಮೂವರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ಭಾನುವಾರ ತಿಳಿಸಿದೆ.
ಪ್ರಾಂತ್ಯದ ಮುಗು ಜಿಲ್ಲೆಯ ಚ್ಯಾರ್ಖು ಪಾಸ್‌ನಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಜಿಲ್ಲೆಯ ಪಾತರಸಿ ಪುರಸಭೆಯಿಂದ ಹದಿನಾಲ್ಕು ಜನರು ಯರ್ಶಗುಂಬ (ಕಂಬಳಿಹುಳು ಶಿಲೀಂಧ್ರ) ಸಂಗ್ರಹಿಸಲು ಚ್ಯಾರ್ಖುಗೆ ಹೋಗಿದ್ದಾರೆ. ಅವರಲ್ಲಿ ಮೂವರು ಸಾವನ್ನಪ್ಪಿದ್ದು, ಒಂಬತ್ತು ಮಂದಿಗೆ ಹಿಮಪಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಭಾರತ – ಪಾಕಿಸ್ತಾನ ಕಾಶ್ಮೀರದ ವಿವಾದವನ್ನು ವಿಶ್ವಸಂಸ್ಥೆ ನಿರ್ಣಯದಂತೆ ಬಗೆಹರಿಸಬೇಕು: ಚೀನಾ
Advertisement
Advertisement
ಮೇ 18ರ ಮೊದಲು ಸ್ಥಳೀಯ ಅಧಿಕಾರಿಗಳು ಪಿಕ್ಕರ್‌ಗಳಿಗೆ ಅವಕಾಶ ನೀಡದಿದ್ದರೂ ನೂರಾರು ಜನರು ಮುಗು ಜಿಲ್ಲೆಯ ಎತ್ತರದ ಪ್ರದೇಶಗಳಿಗೆ ಕಂಬಳಿಹುಳು ಶಿಲೀಂಧ್ರವನ್ನು (Caterpillar Fungus) ಸಂಗ್ರಹಿಸಲು ಪ್ರಯಾಣಿಸಿದ್ದಾರೆ. ಹಿಮಪಾತದಲ್ಲಿ ಸಾವನ್ನಪ್ಪಿದ ಮೂವರು ಅಡ್ಡ ದಾರಿಗಳನ್ನು ಮಾರ್ಗಗಳನ್ನು ಬಳಸಿಕೊಂಡು ಎತ್ತರದ ಪ್ರದೇಶಗಳಿಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಖಲಿಸ್ತಾನಿ ಕಮಾಂಡೋ ಹತ್ಯೆ
Advertisement
Advertisement
ಘಟನೆಯಲ್ಲಿ ಇದುವರೆಗೆ ಒಟ್ಟು ಮೂವರು ಸಾವನ್ನಪ್ಪಿ, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಶೋಧ ಕಾರ್ಯವನ್ನು ಮುಂದುವರೆಸಲು ಪೊಲೀಸ್ ಸಿಬ್ಬಂದಿಯ ತಂಡವು ಘಟನಾ ಸ್ಥಳಕ್ಕೆ ತೆರಳಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮತ್ತೆ ಗುಂಡಿನ ದಾಳಿಗೆ ಸರ್ಬಿಯಾದಲ್ಲಿ 8 ಮಂದಿ ಬಲಿ – ಎರಡು ದಿನದಲ್ಲಿ 2ನೇ ಘಟನೆ