ಲಕ್ನೋ: ನಕಲಿ ಮದ್ಯ ಸೇವಿಸಿ ಮೂವರು ಸಾವನ್ನಪ್ಪಿದ್ದು, ಸುಮಾರು 44 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉತ್ತರ ಪ್ರದೇಶದ ಅಜಂಗಢ್‍ನ ಅಹ್ರೌಲಾ ಪೊಲೀಸ್ ಠಾಣೆ ವ್ಯಾಪ್ತಿಯ ಮಹುಲ್ ನಗರದಲ್ಲಿ ನಡೆದಿದೆ.
ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ನಕಲಿ ಮದ್ಯ ಸೇವಿಸಿ ಮೂವರು ಸಾವನ್ನಪ್ಪಿದ್ದಾರೆ ಮತ್ತು 44 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರು-ಏಳು ಮಂದಿ ಡಯಾಲಿಸಿಸ್‍ನಲ್ಲಿದ್ದಾರೆ. ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಜಂಗಢ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮೃತ್ ತ್ರಿಪಾಠಿ ತಿಳಿಸಿದ್ದಾರೆ. ಇದನ್ನೂ ಓದಿ: ಸದ್ಯ ಪರಿಸ್ಥಿತಿ ಕಂಟ್ರೋಲ್‍ಗೆ ಬಂದಿದೆ: ಶಿವಮೊಗ್ಗ ಡಿಐಜಿ
Advertisement
Uttar Pradesh | Four people died after drinking adultered alcohol in Azamgarh. 41 patients have been admitted to a nearby hospital out of which 2-3 are in serious condition. Strict action will be taken against the liquor seller. Vijay Vishwas Pant, Commissioner pic.twitter.com/fpRgPg6Txi
— ANI UP/Uttarakhand (@ANINewsUP) February 21, 2022
Advertisement
ಇದೀಗ ಪೊಲೀಸರು ಅಂಗಡಿಯ ಇಬ್ಬರು ಮಾರಾಟಗಾರರನ್ನು ಬಂಧಿಸಿದ್ದಾರೆ ಮತ್ತು ಮಾಲೀಕರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸದ್ಯ ಘಟನೆ ಕುರಿತಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.