– ಏರ್ ಇಂಡಿಯಾ ಮಾದರಿಯಲ್ಲಿ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ದುರಂತ
– ಹಲವಾರು ಮನೆಗಳು ಬೆಂಕಿಗಾಹುತಿ; ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ
ವಾಷಿಂಗ್ಟನ್: ಅಮೆರಿಕದ ಕೆಂಟುಕಿಯ ಲೂಯಿಸ್‌ವಿಲ್ಲೆಯಲ್ಲಿರುವ ಏರ್‌ಪೋರ್ಟ್‌ನಿಂದ (Louisville Airport) ಹೊರಟಿದ್ದ ಮೂವರಿದ್ದ ಸರಕು ಸಾಗಣೆ ವಿಮಾನವೊಂದು ಹಾರುವಾಗಲೇ ಅಪಘಾತಕ್ಕೀಡಾಗಿ ಸ್ಫೋಟಗೊಂಡಿದೆ (Cargo Plane Crash). ದುರಂತದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ.
❗️⚠️🇺🇸 – A McDonnell Douglas MD-11 cargo aircraft, operating as UPS Flight 2976, crashed shortly after takeoff from the UPS Worldport hub at Muhammad Ali International Airport in Louisville, Kentucky.
The incident triggered a massive explosion and fire that engulfed multiple… pic.twitter.com/Ry7Tgn7Yh9
— 🔥🗞The Informant (@theinformant_x) November 4, 2025
ವಿಮಾನಪತನಗೊಂಡ ಪ್ರದೇಶದ ಸುತ್ತ ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಿಮ್ಮಿದೆ. ದುರಂತದಲ್ಲಿ ಹಲವಾರು ಮನೆಗಳು ನಾಶವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಘಟನೆ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ವಿಮಾನ ನಿಲ್ದಾಣವನ್ನ ಮುಚ್ಚಿದ್ದು, ಸುತ್ತಮುತ್ತ ಮನೆ ಕಳೆದುಕೊಂಡವರಿಗೆ ಆಶ್ರಯ ನೀಡುವಂತೆ ಸೂಚಿಸಿದ್ದಾರೆ.
ಹೊನೊಲುಲುಗೆ ತೆರಳುತ್ತಿದ್ದ ಮೆಕ್‌ಡೊನೆಲ್ ಡೌಗ್ಲಾಸ್ ಎಂಡಿ-11ಎಫ್ ವಿಮಾನವಾದ (Douglas MD-11 airplane) ಯುಪಿಎಸ್ ಫ್ಲೈಟ್-2976, ನವೆಂಬರ್ 4ರ ಸಂಜೆ ಸಂಜೆ 5:15ಕ್ಕೆ (ಸ್ಥಳೀಯ ಕಾಲಮಾನ) ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ವರದಿ ಮಾಡಿದೆ.
Sad footage out of #sdf #planecrash pic.twitter.com/WEdNYWurJM
— HOOPLARAH (@rylandstill) November 5, 2025
ದುರಂತದ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಮೊದಲು ಎಡ ರೆಕ್ಕೆಯಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ. ನಂತರ ಇಡೀ ವಿಮಾನಕ್ಕೆ ಬೆಂಕಿ ವ್ಯಾಪಿಸಿದ್ದು, ನೆಲಕ್ಕಪ್ಪಳಿಸಿದೆ, ರನ್‌ವೇನಲ್ಲೇ ಉಜ್ಜಿಕೊಂಡು ಸ್ವಲ್ಪದೂರ ಮುಂದಕ್ಕೆ ಹೋಗಿದೆ. ಇದರಿಂದ ರನ್‌ವೇಯಿಂದಾಚೆಗಿದ್ದ ಕಟ್ಟಗಳಿಗೂ ಭಾರೀ ಹಾನಿಯಾಗಿದೆ.
ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ
ಲೂಯಿಸ್‌ವಿಲ್ಲೆಯಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಕೆಂಟುಕಿ ಗವರ್ನರ್ ಆಂಡಿ ಬೆಶಿಯರ್ ತಿಳಿಸಿದ್ದಾರೆ. ಇದು ತಕ್ಷಣದ ಮಾಹಿತಿಯಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
🚨 BREAKING:
UPS airplane crash near Louisville International Airport
Shelter-in-place issued within 5 miles.
Injuries reported, details to come at press conferences.#Kentucky #Louisville #PlaneCrash pic.twitter.com/v3mmqrEpeT
— Moni 💕 (@MoniFunGirl) November 4, 2025
ಜೆಟ್ ಇಂಧನದಿಂದ ವ್ಯಾಪಿಸಿದ ಬೆಂಕಿ
ಲೂಯಿಸ್‌ವಿಲ್ಲೆ ಮೇಯರ್ ಕ್ರೇಗ್ ಗ್ರೀನ್ ಬರ್ಗ್ ಹೇಳುವಂತೆ, ಸರಕು ಸಾಗಣೆ ವಿಮಾನವು ಜೆಟ್ ಇಂಧನವನ್ನ ಸಾಗಿಸುತ್ತಿತ್ತು. ಸ್ಫೋಟಗೊಂಡ ವೇಳೆ ವಿಮಾನದಲ್ಲಿ ಸುಮಾರು 2,80,000 ಗ್ಯಾಲನ್‌ನಷ್ಟು (10 ಲಕ್ಷ ಲೀಟರ್‌ಗೂ ಅಧಿಕ) ಇಂಧನ ಇತ್ತು. ಇದರಿಂದಾಗಿ ಬೆಂಕಿ ಭಾರೀ ಪ್ರಮಾಣದಲ್ಲಿ ವ್ಯಾಪಿಸಿದೆ ಎಂದು ವಿವರಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಚುರುಕು
ವಿಮಾನ ದುರಂತ ತಿಳಿಯುತ್ತಿದ್ದಂತೆ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿವೆ. ದಯವಿಟ್ಟು ಪೈಲಟ್‌ಗಳು, ಸಿಬ್ಬಂದಿ ಮತ್ತು ಬಾಧಿತರಾದ ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸಿ ಎಂದು ಕೆಂಟುಕಿ ಗವರ್ನರ್ ಆಂಡಿ ಬೆಶಿಯರ್ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಯುಪಿಎಸ್ ಒಡೆತನದ ಮೆಕ್‌ಡೊನೆಲ್ ಡೌಗ್ಲಾಸ್ ಎಂಡಿ -11 ವಿಮಾನವನ್ನು 1991 ರಲ್ಲಿ ತಯಾರಿಸಲಾಯಿತು.

