LatestLeading NewsMain PostNational

ಕೃಷ್ಣಮೃಗ ಬೇಟೆಗಾರರಿಂದ 3 ಪೊಲೀಸರ ಹತ್ಯೆ – 1 ಕೋಟಿ ರೂ. ಪರಿಹಾರ ಫೋಷಿಸಿದ ಸಿಎಂ

ಭೋಪಾಲ್: ಸಂಸದರ ಗುಣಾದಲ್ಲಿ ಕೃಷ್ಣಮೃಗ ಬೇಟೆಗಾರರು ಮೂವರು ಪೊಲೀಸರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಹಿನ್ನೆಲೆ ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹತ್ಯೆಯಾದ  ಪೊಲೀಸರ ತಲಾ ಕುಟುಂಬಕ್ಕೆ ಎಕ್ಸ್-ಗ್ರೇಷಿಯಾ 1 ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ.

ಶನಿವಾರ ಮಧ್ಯಪ್ರದೇಶದ ಗುನಾ ಜಿಲ್ಲೆಯ ಅರಣ್ಯದಲ್ಲಿ ಕೃಷ್ಣಮೃಗ ಬೇಟೆಗಾರರ ಗುಂಡಿಗೆ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಆರನ್ ಪ್ರದೇಶದಲ್ಲಿ ದುಷ್ಕರ್ಮಿಗಳು ಇರುವ ಬಗ್ಗೆ ಮಾಹಿತಿ ಪಡೆದು ಅವರನ್ನು ಹಿಡಿಯಲು ಹೋದಾಗ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪೊಲೀಸ್ ಸಿಬ್ಬಂದಿ ದುಷ್ಕರ್ಮಿಗಳ ವಿರುದ್ಧ ದಾಳಿ ನಡೆಸಿದ್ದಾರೆ. ಪೊಲೀಸರು ಸುತ್ತುವರಿದು ಮುಖಾಮುಖಿಯಾದಾಗ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಪೊಲೀಸರೂ ಪ್ರತಿದಾಳಿ ನಡೆಸಿದರು. ಆದರೂ ದುಷ್ಕರ್ಮಿಗಳ ತೀವ್ರ ದಾಳಿಯಿಂದ 3 ಪೊಲೀಸರು ಮೃತಪಟ್ಟಿದ್ದಾರೆ. ಇದನ್ನೂ ಓದಿ:  2 ಗಂಟೆಗಳ ನಿರಂತರ ಕಾರ್ಯಾಚರಣೆಯಲ್ಲಿ ಬದುಕುಳಿದ ಕ್ಯಾಂಟರ್ ಚಾಲಕ 

ಪರಿಹಾರ ಘೋಷಿಸಿದ ಸಿಎಂ
ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಘಟನೆಯ ಕುರಿತು ತಮ್ಮ ನಿವಾಸದಲ್ಲಿ ಉನ್ನತ ಮಟ್ಟದ ತುರ್ತು ಸಭೆ ನಡೆಸಿದರು. ಮೂವರು ಪೊಲೀಸ್ ಸಿಬ್ಬಂದಿಯ ಕುಟುಂಬಗಳಿಗೆ ಎಕ್ಸ್-ಗ್ರೇಷಿಯಾ ತಲಾ 1 ಕೋಟಿ ರೂ. ಪರಿಹಾರವನ್ನು ಘೋಷಿಸಿದರು. ಡಿಜಿಪಿ, ಗೃಹ ಸಚಿವರು, ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಈ ಕುರಿತು ಶಿವರಾಜ್ ಸಿಂಗ್ ಚೌಹಾಣ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಮ್ಮ ಪೊಲೀಸ್ ಸಿಬ್ಬಂದಿ ಕಳ್ಳ ಬೇಟೆಗಾರರನ್ನು ಎದುರಿಸುವಾಗ ಆತ್ಮಾರ್ಪಣೆ ಮಾಡಿಕೊಂಡರು. ಅಪರಾಧಿಗಳ ವಿರುದ್ಧ ಮಾದರಿ ಕ್ರಮ ಕೈಗೊಳ್ಳಲಾಗುವುದು. ಅವರನ್ನು ಬಹುತೇಕ ಗುರುತಿಸಲಾಗಿದೆ. ತನಿಖೆ ನಡೆಯುತ್ತಿದೆ. ಅವರಿಗೆ ಕಠಿಣ ಶಿಕ್ಷೆಯಾಗುತ್ತೆ ಎಂದು ಹೇಳಿದರು. ಇದನ್ನೂ ಓದಿ: ಕರಿಯಲ್ಲಿ ಖಾರ ಹೆಚ್ಚಾಗಿದ್ದಕ್ಕೆ ಪತ್ನಿಯ ತಲೆ ಬೋಳಿಸಿದ 

ಎಕ್ಸ್-ಗ್ರೇಷಿಯಾ ಎಂದರೇನು?
ಕಾಡು ಮೃಗಗಳಿಂದ ಮನುಷ್ಯನ ಸಾವು ಸಂಭವಿಸಿದಲ್ಲಿ ಕೃಪಾಧನ ನೀಡುವುದನ್ನು ಎಕ್ಸ್-ಗ್ರೇಷಿಯಾ ಎನ್ನುತ್ತಾರೆ.

Leave a Reply

Your email address will not be published.

Back to top button