ಬೆಂಗಳೂರು: ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸಿ ಮುನ್ನೆಲೆಗೆ ಬಂದಿರೋ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ತ್ರಿವಳಿ ಕಂಟಕ ಎದುರಾಗಿದೆ. ಈ ಮೂರು ಆತಂಕಗಳನ್ನು ಎದುರಿಸಿ ವಿಧಾನಸೌಧದಲ್ಲಿ ವಿಪಕ್ಷ ನಾಯಕನ ಸ್ಥಾನದಲ್ಲಿ ಸಿದ್ದರಾಮಯ್ಯ ಕುಳಿತುಕೊಳ್ಳುತ್ತಾರಾ ಎಂಬ ಪ್ರಶ್ನೆಯೊಂದು ಕೈ ಪಡಸಾಲೆಯಲ್ಲಿ ಮೂಡಿದೆ.
ಮೈತ್ರಿ ಸರ್ಕಾರ ಪತನಗೊಂಡ ಕ್ಷಣದಿಂದ ಸಿದ್ದರಾಮಯ್ಯನವರು ವಿಪಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ವಿಪಕ್ಷ ನಾಯಕನ ಸ್ಥಾನಕ್ಕಾಗಿ ಮಾಜಿ ಡಿಸಿಎಂ ಜಿ.ಪರಮೇಶ್ವರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಹ ಸ್ಪರ್ಧೆಯಲ್ಲಿದ್ದರು. ಡಿ.ಕೆ.ಶಿವಕುಮಾರ್ ತಿಹಾರ್ ಜೈಲು ಸೇರಿದ್ದರಿಂದ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಆಪ್ತರನ್ನೇ ಬಿಟ್ಟು ದಾಳ ಉರುಳಿಸಿದ ‘ಟಗರು’-ಒಂದೇ ಅಸ್ತ್ರ, ಎರಡು ಟಾರ್ಗೆಟ್
ಈ ಎಲ್ಲ ಬೆಳವಣಿಗೆಗಳ ನಡುವೆ ಸಿದ್ದರಾಮಯ್ಯರ ವರ್ತನೆ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕರಾಗಿರುವ ಬಿ.ಕೆ.ಹರಿಪ್ರಸಾದ್, ಮುನಿಯಪ್ಪ ಮತ್ತು ಪರಮೇಶ್ವರ್ ಹೈಕಮಾಂಡಿಗೆ ದೂರು ಸಲ್ಲಿಸಿದ್ದಾರಂತೆ. ದೂರು ನೀಡಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯರಿಗೆ ವಿಪಕ್ಷ ನಾಯಕನ ಸ್ಥಾನ ತಪ್ಪಲಿದೆಯಾ ಎಂಬಿತ್ಯಾದಿ ಚರ್ಚೆಗಳು ಕೈ ಅಂಗಳದಲ್ಲಿ ಆರಂಭಗೊಂಡಿವೆ. ಇದನ್ನೂ ಓದಿ: Exclusive ಸಿದ್ದರಾಮಯ್ಯ ವಿರುದ್ಧ ಸೈಲೆಂಟ್ ಚಕ್ರವ್ಯೂಹ- ಟಗರು ವಿರುದ್ಧ ವಾರ್?