ಪಶ್ಚಿಮ ಘಟ್ಟದಿಂದ ಮಲ್ಪೆಗೆ ಬಂತು ಕಲರ್ ಕಲರ್ ಹಾವು!

Public TV
1 Min Read
udp snake copy

-ಮೂರು ಬಣ್ಣದ ಹಾವು ಕಂಡು ಜನ ಶಾಕ್

ಉಡುಪಿ: ಜಿಲ್ಲೆಯಲ್ಲಿ ಅಪರೂಪದ ಮೂರು ಬಣ್ಣದ ಹಾವು ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲೇ ಹೆಚ್ಚಾಗಿ ಕಂಡು ಬರುವ ಈ ಅಪರೂಪದ ಹಾರುವ ಹಾವು ನಗರ ಪ್ರದೇಶಕ್ಕೆ ಬಂದಿದೆ. ಮೂರು ಬಣ್ಣದ ಹಾವು ಕಂಡು ಮಲ್ಪೆ ಜನ ಆಶ್ಚರ್ಯಚಕಿತರಾಗಿದ್ದಾರೆ.

ಉಡುಪಿಯ ಮಲ್ಪೆ ಪರಿಸರದ ಹೋಟೆಲೊಂದರಲ್ಲಿ ಈ ಅಪರೂಪದ ಹಾವು ಸರಿದಾಡಿದೆ. ಇದನ್ನು ಗೋಲ್ಡನ್ ಟ್ರೀ ಸ್ನೇಕ್ ಎಂದು ಸಾಮಾನ್ಯ ಭಾಷೆಯಲ್ಲಿ ಕರೆಯುತ್ತಾರೆ. ಹಾವಿನ ವೈಜ್ಞಾನಿಕ ಹೆಸರು ಕೈಸೋಪೆಲಿಯಾ ಆರ್ನೆಟ. ಮಲ್ಪೆಯ ಹೊಟೇಲಿಗೆ ಚಿಕ್ಕಮಗಳೂರು, ಶಿವಮೊಗ್ಗದಿಂದ ತರಕಾರಿ ತರಲಾಗುತ್ತದೆ. ತರಕಾರಿ ಬುಟ್ಟಿಯ ಮೂಲಕ ಈ ಹಾವು ಹೊರ ಬಂದಿರುವ ಸಾಧ್ಯತೆಯಿದೆ.

udp snake 2 copy

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರುರಾಜ್ ಸನಿಲ್, ಹೆಚ್ಚಾಗಿ ದೊಡ್ಡ ದೊಡ್ಡ ಮರದಲ್ಲೇ ಈ ಹಾವು ವಾಸಿಸುತ್ತವೆ. ಮರದಿಂದ ಮರಕ್ಕೆ ಕೆಳಮುಖವಾಗಿ ನೆಗೆಯೋದು ಈ ಹಾವಿನ ವಿಶೇಷ. ಇದೇ ಮೊದಲ ಬಾರಿಗೆ ನಗರ ಭಾಗದಲ್ಲಿ ಇಂತಹ ಹಾವು ಪತ್ತೆಯಾಗಿವೆ. ಶಿವಮೊಗ್ಗ, ಚಿಕ್ಕಮಗಳೂರು ಭಾಗದಿಂದ ಸಾಕಷ್ಟು ತರಕಾರಿ ಲಾರಿಗಳು ಉಡುಪಿಗೆ ಬರುತ್ತದೆ. ಹೀಗಾಗಿ ತರಕಾರಿ ವಾಹನಕ್ಕೆ ಈ ಹಾವು ಮರದಿಂದ ಹಾರಿರಬಹುದು. ಹೀಗೆ ಹಾರಿ ಬಂದಿರೋ ಹಾವು ಮಲ್ಪೆಗೆ ತಲುಪಿರುವ ಸಾಧ್ಯತೆಯಿದೆ ಎಂದರು.

ಮೈಮೇಲೆ ಆಕರ್ಷಕ ಕೆಂಪು, ಕಪ್ಪು, ಬಿಳಿ ಪಟ್ಟಿಗಳನ್ನು ಹೊಂದಿರುವ ಈ ಹಾವು, ಗರಿಷ್ಟ ಒಂದೂವರೆ ಮೀಟರ್ ನಷ್ಟು ಉದ್ದವಿರುತ್ತದೆ. ಭಯಾನಕವಾಗಿ ಕಂಡುಬಂದರೂ ಈ ಹಾವು ವಿಷಕಾರಿಯಲ್ಲ. ಸೆರೆ ಹಿಡಿದ ಹಾವನ್ನು ಗುರುರಾಜ್ ಸುರಕ್ಷಿತ ಸ್ಥಳಕ್ಕೆ ಬಿಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *