ಕೊಲಂಬೋ: ಡೆನ್ಮಾರ್ಕ್ ನ ಶ್ರೀಮಂತ ವ್ಯಕ್ತಿ ಆಂಡರ್ಸ್ ಹೊಲ್ಚ್ ಪೊವೆಲ್ಸೆನ್ ಅವರ ಮೂವರು ಮಕ್ಕಳು ಶ್ರೀಲಂಕಾದ ಕೊಲಂಬೋದಲ್ಲಿ ಭಾನುವಾರ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಬಲಿಯಾಗಿದ್ದಾರೆ.
ಭಾನುವಾರದಂದು ಕೊಲಂಬೋದ 8 ಕಡೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಈವರೆಗೆ 290 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಭೀಕರ ದುರಂತದಲ್ಲಿ ಡೆನ್ಮಾರ್ಕ್ ಮೂಲಕ ಶತ ಕೋಟ್ಯಧಿಪತಿ ಆಂಡರ್ಸ್ ಹೊಲ್ಚ್ ಪೊವೆಲ್ಸೆನ್ ತಮ್ಮ ಮೂವರು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಪೊವೆಲ್ಸೆನ್ ಅವರಿಗೆ ಒಟ್ಟು ನಾಲ್ಕು ಮಂದಿ ಮಕ್ಕಳಿದ್ದರು. ಶ್ರೀಲಂಕಾಗೆ ಪೊವೆಲ್ಸೆನ್ ಕುಟುಂಬ ಸಮೇತರಾಗಿ ಪ್ರವಾಸಕ್ಕೆ ಬಂದಿದ್ದರು. ಆದ್ರೆ ದುರದೃಷ್ಟವಶಾತ್ ಕುಟುಂಬದೊಡನೆ ಖುಷಿಯನ್ನು ಸಂಭ್ರಮಿಸಲು ಬಂದು ತಮಗಿದ್ದ ನಾಲ್ವರು ಮಕ್ಕಳಲ್ಲಿ ಮೂವರನ್ನು ಪೊವೆಲ್ಸೆನ್ ದಂಪತಿ ಕಳೆದುಕೊಂಡು ದುಃಖಿಸುತ್ತಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ 7 ಮಂದಿ ಜೆಡಿಎಸ್ ಕಾರ್ಯಕರ್ತರು ನಾಪತ್ತೆ – ಸಿಎಂ
Advertisement
Advertisement
ಪೊವೆಲ್ಸೆನ್ ಫ್ಯಾಶನ್ ಸಂಸ್ಥೆಯ ಮಾಲೀಕರಾಗಿದ್ದು, ವೆರೊ ಮೊಡಾ ಮತ್ತು ಜ್ಯಾಕ್ & ಜೋನ್ಸ್ ನಂತಹ ಬ್ರಾಂಡ್‍ಗಳನ್ನು ಒಳಗೊಂಡಿದೆ ಮತ್ತು ಆನ್ಲೈನ್ ಮಾರಾಟದ ಆಸೋಸ್‍ನಲ್ಲಿ ಹೆಚ್ಚಿನ ಪಾಲುದಾರರಾಗಿದ್ದು, ಜಲಾಂಡೋದಲ್ಲಿ ದೊಡ್ಡ ಮೊತ್ತದ ಶೇರ್ ಗಳನ್ನು ಹೊಂದಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಸರಣಿ ಸ್ಫೋಟದಲ್ಲಿ ನೆಲಮಂಗಲದ ಇಬ್ಬರು ಸಾವು, 6 ಮಂದಿ ನಾಪತ್ತೆ!
Advertisement
Advertisement
ಈಸ್ಟರ್ ಶುಭ ಸಂದರ್ಭದಲ್ಲಿ ಪ್ರಾರ್ಥನೆಗೆ ಸೇರಿದ್ದವರನ್ನು ಗುರಿಯಾಗಿಸಿ ಭಾನುವಾರ ಬೆಳಗ್ಗೆ 8:45ಕ್ಕೆ ಬಾಂಬ್ ಸ್ಫೋಟಿಸಲಾಗಿದೆ. ಕೊಲಂಬೋ ಬಂದರು ಸಮೀಪದ ಸೆಬಾಸ್ಟಿಯನ್ ಚರ್ಚ್, ಸೇಂಟ್ ಅಂತೋನಿಯ ಶ್ರೈನ್, ಜಿಯಾನ್ ಚರ್ಚ್, ಸಿನ್ನಮೋನ್ ಗ್ರ್ಯಾಂಡ್, ಕೊಲಂಬೊದ ಶಾಂಗ್ರಿ-ಲಾ ಹೋಟೆಲ್, ಕಿಂಗ್ಸ್ಬರಿ ಹೋಟೆಲ್, ದೆಹಿವಾಲಾ -ಮೌಂಟ್ ಲವಿನಿಯಾದಲ್ಲಿನ ದೆಹಿವಾಲಾ ಝೂ, ಮಹವಿಲಾ ಗಾರ್ಡನ್ಸ್‍ನಲ್ಲಿ ಬಾಂಬ್ ಸ್ಫೋಟವಾಗಿದೆ.
ಬಾಂಬ್ ಸ್ಫೋಟದ ತೀವ್ರತೆಗೆ ಚರ್ಚ್ ಗಳ ಮೇಲ್ಛಾವಣಿ ಕಿತ್ತು ಹಾರಿಹೋಗಿತ್ತು. ಚರ್ಚ್ ಒಳಗಡೆಯಿದ್ದ ಬೆಂಚ್‍ಗಳು ಮುರಿದು ಹೋಗಿತ್ತು. ಚರ್ಚ್ ಒಳಗಡೆ ಎಲ್ಲಿ ನೋಡಿದರಲ್ಲಿ ರಕ್ತವೇ, ಛಿದ್ರ ಛಿದ್ರ ಮೃತದೇಹಗಳೇ ಕಾಣಸಿಗುತಿತ್ತು.