ಚಂಡೀಗಢ: ರೈಲ್ವೇ ಹಳಿ (Railway track) ಮೇಲೆ ಆಟವಾಡುತ್ತಿದ್ದಾಗ ವಲಸೆ ಕಾರ್ಮಿಕರ ಮೂವರು ಮಕ್ಕಳಿಗೆ (Children) ರೈಲು (Train) ಡಿಕ್ಕಿ ಹೊಡೆದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪಂಜಾಬ್‌ನ (Punjab)ಕಿರಾತ್‌ಪುರ ಸಾಹಿಬ್ ಬಳಿ ನಡೆದಿದೆ. ಘಟನೆಯ ಕುರಿತು ಪಂಜಾಬ್ ಸರ್ಕಾರ ತನಿಖೆಗೆ ಆದೇಶಿಸಿದೆ.
ನಗರದ ಸಟ್ಲೆಜ್ ನದಿಯ ಸೇತುವೆ ಸಮೀಪವಿರುವ ರೈಲ್ವೇ ಹಳಿ ಮೇಲೆ ವಲಸೆ ಕಾರ್ಮಿಕರ 4 ಮಕ್ಕಳು ಆಟವಾಡುತ್ತಿದ್ದಾಗ ದುರ್ಘಟನೆ ನಡೆದಿದೆ. ನಾಲ್ಕನೇ ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್‍ನಲ್ಲಿ ಟಿಕೆಟ್ ಫೈಟ್- ಕೊಡಗಿನಲ್ಲಿ 2 ಕ್ಷೇತ್ರಗಳಿಗೆ 9 ಜನರಿಂದ ಅರ್ಜಿ
Advertisement
Advertisement
ಸಾವನ್ನಪ್ಪಿರುವ ಮಕ್ಕಳು 7 ರಿಂದ 11 ವರ್ಷದೊಳಗಿನವರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಪಂಜಾಬ್ ಶಾಲಾ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ದುಃಖ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬಾಂಬರ್ ಶಾರೀಕ್ ಹತ್ಯೆಗೆ ಸಂಚು ಶಂಕೆ- ಆಸ್ಪತ್ರೆ ಸುತ್ತ ಹೆಚ್ಚಿದ ಭದ್ರತೆ
Advertisement
ಅಪಘಾತದಲ್ಲಿ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ನೀಡುವಂತೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೋರಿದ್ದಾರೆ.