ಸತ್ತ ನಾಯಿಗಳನ್ನು ತಿಂದ ಮೂರು ಚಿರತೆಗಳು ಸಾವು?

Public TV
1 Min Read
mys cheetah death 1

ಮೈಸೂರು: ಸತ್ತ ನಾಯಿಗಳನ್ನು ತಿಂದ ಮೂರು ಚಿರತೆಗಳು ಮೃತಪಟ್ಟ ಘಟನೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದೆ.

ಹಲ್ಲರೆ ಗ್ರಾಮದ ಸಾರ್ವಜನಿಕ ಆಸ್ಪತ್ರೆಯ ಹಿಂಬದಿಯಲ್ಲಿರುವ ಚೆನ್ನಬಸಪ್ಪ ಎಂಬವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ಅರಣ್ಯ ವಲಯದಿಂದ ಹಲ್ಲರೆ ಗ್ರಾಮದತ್ತ ಆಗಮಿಸಿರುವ ಸುಮಾರು 10 ವರ್ಷದ ಹೆಣ್ಣು ಚಿರತೆಯ ಜೊತೆಗೆ 8 ತಿಂಗಳ, 2 ಹೆಣ್ಣು ಚಿರತೆ ಮರಿಗಳು ಸಾವನ್ನಪ್ಪಿವೆ.

mys cheetah death

ಈ ವಿಷಯ ತಿಳಿದು ನಂಜನಗೂಡಿನ ಆರ್‍ಎಫ್‍ಓ ಲೋಕೇಶ್ ಮೂರ್ತಿ ಮತ್ತು ಸಿಬ್ಬಂದಿ ಘಟನೆ ನಡೆದ ಸ್ಥಳಕ್ಕೆ ಧಾವಿಸಿದ್ದಾರೆ. ಚಿರತೆ ಸತ್ತ ನಾಯಿಯನ್ನು ತಿಂದು ಸಾವನ್ನಪ್ಪಿದೆ. ನಾಯಿಗಳ ಹಾವಳಿ ತಪ್ಪಿಸಲು ಅವುಗಳಿಗೆ ವಿಷಾಹಾರ ಇಡಲಾಗಿದ್ದು, ಅದನ್ನು ತಿಂದು ನಾಯಿಗಳು ಸಾವನ್ನಪ್ಪಿದ್ದವು. ಈ ನಾಯಿಗಳನ್ನು ಚಿರತೆಗಳು ತಿಂದಿದ್ದು, ಅವುಗಳೂ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಚಿರತೆ ಸಾವನಪ್ಪಿರುವ ವಿಷಯ ತಿಳಿಯುತ್ತಿದ್ದಂತೆಯೇ ಜಮೀನಿನ ಮಾಲೀಕ ಚನ್ನಬಸಪ್ಪ ಪರಾರಿಯಾಗಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *