ನವದೆಹಲಿ: ಬಿಲ್ಕಿಸ್ ಬಾನೊ (Bilkis Bano Case) ಪ್ರಕರಣದ ಮೂವರು ಅಪರಾಧಿಗಳು ಶರಣಾಗಲು ಹೆಚ್ಚಿನ ಕಾಲಾವಕಾಶ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ (Supreme Court) ಗುರುವಾರ ಒಪ್ಪಿಗೆ ನೀಡಿದೆ.
11 ಮಂದಿಯನ್ನು ಮುಂಚಿತವಾಗಿ ಬಿಡುಗಡೆ ಮಾಡಿದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ನಂತರ ಅವರನ್ನು ಮತ್ತೆ ಜೈಲಿಗೆ ಕಳುಹಿಸಲು ಆದೇಶಿಸಿತ್ತು. ಇದಾದ ಒಂದು ವಾರದ ನಂತರ ಅಪರಾಧಿಗಳು ಅರ್ಜಿಗಳನ್ನು ಸಲ್ಲಿಸಿದ್ದರು. ಇದನ್ನೂ ಓದಿ: ರನ್‌ವೇನಲ್ಲೇ ಕುಳಿತು ಊಟ ಸೇವಿಸಿದ ಪ್ರಯಾಣಿಕರು – ಇಂಡಿಗೋಗೆ 1.2 ಕೋಟಿ ದಂಡ
Advertisement
Advertisement
ಹಿರಿಯ ವಕೀಲ ವಿ.ಚಿತಾಂಬರೇಶ್ ಅವರು ಅರ್ಜಿಯ ಆರಂಭಿಕ ವಿಚಾರಣೆಯನ್ನು ಕೋರಿದರು. ಈ ಮೂವರು ಅಪರಾಧಿಗಳು ಜನವರಿ 21 ರಂದು ಶರಣಾಗಲು ಕೇವಲ ಮೂರು ದಿನಗಳು ಮಾತ್ರ ಉಳಿದಿವೆ ಎಂದು ಹೇಳಿದರು. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು, ಪೀಠವನ್ನು ರಚಿಸುವಂತೆ ಸಿಜೆಐ ಡಿ.ವೈ.ಚಂದ್ರಚೂಡ್ ಅವರಿಂದ ಆದೇಶ ಪಡೆಯಲು ನೋಂದಣೆಗೆ ನಿರ್ದೇಶನ ನೀಡಿದರು.
Advertisement
ಜನವರಿ 8 ರಂದು ಮಹತ್ವದ ತೀರ್ಪಿನಲ್ಲಿ, 2002 ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಿದ 11 ಜನರಿಗೆ ಕ್ಷಮೆ ನೀಡುವ ಗುಜರಾತ್ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. 2022 ರ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾದ ಅಪರಾಧಿಗಳು ಜನವರಿ 22 ರೊಳಗೆ ಶರಣಾಗುವಂತೆ ನ್ಯಾಯಾಧೀಶರು ಸೂಚಿಸಿದ್ದರು. ಇದನ್ನೂ ಓದಿ: ಅಮಿತ್ ಶಾ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ ಮಾಜಿ ಸಿಎಂ ಹೆಚ್‌ಡಿಕೆ
Advertisement
ಅಪರಾಧಿ ಗೋವಿಂದಭಾಯಿ ನೈ, ಇನ್ನೂ ನಾಲ್ಕು ವಾರಗಳ ಕಾಲಾವಕಾಶ ಕೇಳಿದ್ದಾರೆ. ರಮೇಶ್ ಚಂದನಾ ಮತ್ತು ಮಿತೇಶ್ ಭಟ್ ತಾವು ಹಾಜರಾಗಲು ಇನ್ನೂ ಆರು ವಾರಗಳ ಕಾಲ ಕೋರಿದ್ದಾರೆ.
ಕ್ಷೌರಿಕನಾಗಿ ಕೆಲಸ ಮಾಡುವ ನೈ, 88 ವರ್ಷದ ಹಾಸಿಗೆ ಹಿಡಿದ ತಂದೆ ಮತ್ತು 75 ವರ್ಷದ ತಾಯಿ ಇದ್ದಾರೆ. ಅವರು ನನ್ನನ್ನೇ ಅವಲಂಬಿಸಿದ್ದಾರೆ. ನನ್ನ ಇಬ್ಬರು ಮಕ್ಕಳ ಆರ್ಥಿಕ ಅಗತ್ಯಗಳಿಗೆ ನಾನೇ ಜವಾಬ್ದಾರ. 55 ವಯಸ್ಸಿನ ನನಗೂ ಅನಾರೋಗ್ಯ ಸಮಸ್ಯೆಗಳಿವೆ. ಅಸ್ತಮಾದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಜೈಲಿನಿಂದ ಬಿಡುಗಡೆಯಾದ ನಂತರ ನಾನು ಯಾವುದೇ ಕಾನೂನು ಉಲ್ಲಂಘಿಸಿಲ್ಲ. ಬಿಡುಗಡೆ ಆದೇಶದ ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸಿದ್ದೇನೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾನೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ಗೆಳತಿಯನ್ನು ಕತ್ತುಹಿಸುಕಿ ಕೊಂದು ತಾನೂ ಆತ್ಮಹತ್ಯೆ ಮಾಡ್ಕೊಂಡ!
ಮತ್ತೊಬ್ಬ ಅಪರಾಧಿ ಮಿತೇಶ್ ಭಟ್, ಮಗನ ಮದುವೆ ಇದೆ. ಹೀಗಾಗಿ ಮತ್ತೆ ಶರಣಾಗಲು ನನಗೆ ಕಾಲಾವಕಾಶ ನೀಡಬೇಕು ಎಂದು ಕೋರಿದ್ದಾನೆ.