ಬೆಂಗಳೂರು: ಆನೇಕಲ್ ನಲ್ಲಿರೋ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಅಧಿಕಾರಿಗಳ ಬೇಜಾವಾಬ್ದಾರಿಗೆ ಮತ್ತೊಂದು ಪ್ರಾಣಿ ಅಪಾಯದಲ್ಲಿದೆ.
ಹೌದು. ಉದ್ಯಾನವನದ ಬೆಂಗಾಲ್ ಟೈಗರ್ಸ್ ಇದ್ದ ಕೇಜ್ ಗೆ ಬಿಳಿ ಹುಲಿಯೊಂದು ದಾರಿ ತಪ್ಪಿ ಬಂದಿದೆ. ಈ ವೇಳೆ ಮೂರು ಬೆಂಗಾಲ್ ಟೈಗರ್ಸ್ ಗಳು ಬಿಳಿ ಹುಲಿಯ ಮೇಲೆ ದಾಳಿ ನಡೆಸಿವೆ. ಪರಿಣಾಮ ಬಿಳಿ ಹುಲಿಗೆ ತೀವ್ರ ಗಾಯಗಳಾಗಿದೆ.
Advertisement
ಬಿಳಿ ಹುಲಿಯ ಬೆನ್ನಿಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಸದ್ಯ ಹುಲಿ ಮಲಗಿದಲ್ಲಿಯೇ ಇದ್ದು, ಬನ್ನೇರುಘಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಕೇಜ್ ನಿಂದ ಕೇಜ್ ಗೆ ಸುಲಭವಾಗಿ ಹೋಗಲು ಸಾಧ್ಯವಿರುವುದಿಲ್ಲ. ಆದ್ರೂ ಬಿಳಿ ಹುಲಿ ಹೋದಾಗ ಅಧಿಕಾರಿಗಳು ಕ್ರಮವಹಿಸದೆ ನಿರ್ಲಕ್ಷ್ಯ ತೋರಿದ್ದರಿಂದ ಈ ಘಟನೆ ನಡೆದಿದೆ.
Advertisement
2 ತಿಂಗಳ ಹಿಂದಷ್ಟೇ ಗುಂಡಿಯೊಂದನ್ನು ತೋಡಿ ಅದರಲ್ಲಿ ಝೀಬ್ರಾವೊಂದು ಬಿದ್ದು ಮೃತಪಟ್ಟಿತ್ತು. ಈ ಘಟನೆ ಮಾಸುವ ಮುನ್ನವೇ ಅದೇ ಡಿಎಫ್‍ಓನಿಂದ ಮತ್ತೊಂದು ಎಡವಟ್ಟು ಎದುರಾಗಿದೆ. ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.
Advertisement
ಇದನ್ನೂ ಓದಿ: ಬನ್ನೇರುಘಟ್ಟದಲ್ಲಿ ಇಸ್ರೇಲ್ ನಿಂದ ತಂದಿದ್ದ ಗರ್ಭಿಣಿ ಜೀಬ್ರಾ ಸಾವು
Advertisement
https://www.youtube.com/watch?v=8sATYADYfzc&feature=youtu.be
ಇದನ್ನೂ ಓದಿ: ಬನ್ನೇರುಘಟ್ಟ ಹುಲಿ ಸಫಾರಿಯಲ್ಲಿ 3 ಹೊಸ ಅತಿಥಿಗಳ ಆಗಮನ
ಇದನ್ನೂ ಓದಿ: ಬನ್ನೇರುಘಟ್ಟದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಆನೆ ದಾಳಿಗೆ ವ್ಯಕ್ತಿ ಬಲಿ!