-ಅತ್ಯಾಚಾರ ಸಂತ್ರಸ್ತೆಯಿಂದ ಮಗು ಖರೀದಿಸಿದ್ದ ಉಡುಪಿ ದಂಪತಿಗಳು
ಉಡುಪಿ/ಮಂಗಳೂರು: ಆಸ್ಪತ್ರೆಯಿಂದ ಕಾನೂನುಬಾಹಿರವಾಗಿ ಮಗು ಮಾರಾಟ ಮಾಡಿದ್ದ ಜಾಲವೊಂದು ಪತ್ತೆಯಾಗಿದ್ದು, ವೈದ್ಯ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು (Mangaluru) ಮೂಲದ ವೈದ್ಯ ಡಾ.ಸೋಮೇಶ್ ಸೋಲೋಮನ್, ಮಧ್ಯವರ್ತಿ ಮಹಿಳೆ ವಿಜಯಲಕ್ಷ್ಮಿ ಹಾಗೂ ಅತ್ಯಾಚಾರ ಆರೋಪಿ ನವನೀತ್ ನಾರಾಯಣ ಬಂಧಿತ ಆರೋಪಿಗಳು.ಇದನ್ನೂ ಓದಿ: ಮಂಡ್ಯ | ಆಸ್ತಿಗಾಗಿ ಅಪ್ಪನನ್ನೇ ಟ್ರ್ಯಾಪ್ ಮಾಡಲು ಹೋಗಿ ತಗ್ಲಾಕೊಂಡ ಮಗ
ಈ ಕುರಿತು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಉಡುಪಿಯ (Udupi) ಶಿರ್ವ (Shirva) ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂಗನವಾಡಿಯಲ್ಲಿ ಪೋಷಣ್ ಟ್ರ‍್ಯಾಕರ್ ರಿಜಿಸ್ಟರ್ ಸಂದರ್ಭದಲ್ಲಿ ಈ ಮಗು ದಂಪತಿಗಳದ್ದಲ್ಲ ಎನ್ನೋದು ತಿಳಿದು ಬಂದಿದೆ ಎಂದು ಆರೋಪಿಸಿದ್ದಾರೆ.
ದೂರಿನ ಆಧಾರದ ಮೇಲೆ ತನಿಖೆಗಿಳಿದ ಪೊಲೀಸರಿಗೆ ಮಗು ಮಾರಾಟ ಜಾಲ ಪತ್ತೆಯಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ನವನೀತ್ ನಾರಾಯಣ ಎಂಬಾತ ಮಾನಸಿಕ ವೈಕಲ್ಯದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ. ಸಂತ್ರಸ್ತೆಗೆ ಮಗುವಾದ ಬಳಿಕ ಉಡುಪಿ ದಂಪತಿಗಳು ಆಸ್ಪತ್ರೆಯಿಂದಲೇ ಮಗುವನ್ನು ಖರೀದಿಸಿದ್ದಾರೆ. ಬಳಿಕ ವಿಜಯಲಕ್ಷ್ಮಿ ಎನ್ನುವ ಮಧ್ಯವರ್ತಿ ಮಹಿಳೆಯ ಮೂಲಕ 4 ಲಕ್ಷ ರೂ.ಯನ್ನು ಪಾವತಿಸಿದ್ದಾರೆ. ಮಗು ಮಾರಾಟದಲ್ಲಿ ವೈದ್ಯ ಡಾ.ಸೋಮೇಶ್ ಸೋಲೋಮನ್ ಶಾಮೀಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಉಡುಪಿಯ ಶಿರ್ವ ಠಾಣೆಯ ಪೊಲೀಸರು ಮೂವರನ್ನು ಬಂಧಿಸಿದ್ದು, ಮಗು ಖರೀದಿಸಿದ್ದ ಉಡುಪಿ ದಂಪತಿಗಳ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭದ್ರಾವತಿ | ಇಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ – 2000 ಪೊಲೀಸರ ನಿಯೋಜನೆ

