ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಳೇ ನೋಟುಗಳ ಎಕ್ಸ್ ಚೇಂಜ್ ದಂಧೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ನೋಟ್ ಬ್ಯಾನ್ ಆಗಿ 16 ತಿಂಗಳು ಕಳೆದು ಹೋದ್ರೂ ಹಳೇ ನೋಟುಗಳ ಅಕ್ರಮ ಬದಲಾವಣೆ ಮಾತ್ರ ಇನ್ನೂ ನಿಂತಿಲ್ಲ.
Advertisement
ಕಳೆದ ರಾತ್ರಿ ಹಳೇ 1000 ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನ ಎಕ್ಸ್ ಚೇಂಜ್ ಮಾಡಲು ಬಂದ ಮೂವರನ್ನ ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅರೋಪಿಗಳ ಬಳಿ 1.95 ಕೋಟಿ ಹಳೇ ನೋಟುಗಳು ಪತ್ತೆಯಾಗಿದ್ದು, ಇವರು ಮಧ್ಯವರ್ತಿಯೊಬ್ಬನ ಮೂಲಕ ಹೊಸ ನೋಟುಗಳಿಗೆ ಎಕ್ಸ್ ಚೇಂಜ್ ಮಾಡಲು ಬಂದಿದ್ದರು ಎನ್ನಲಾಗಿದೆ.
Advertisement
Advertisement
ಕೊತ್ತನೂರು ಮುಖ್ಯರಸ್ತೆಯ ಗೋಲ್ಡನ್ ಪಾಮ್ ಅಪಾರ್ಟ್‍ಮೆಂಟ್ ನಲ್ಲಿ ವ್ಯವಹಾರ ಕುದುರಿಸಿದ್ದ ಇವರು ಹೊಸ ನೋಟು ಎಕ್ಸ್ ಚೇಂಜ್ ಮಾಡುತ್ತಿದ್ದ ಮತ್ತೊಬ್ಬ ಮಧ್ಯವರ್ತಿಗಾಗಿ ಕಾಯುತ್ತಿದ್ದರು ಎಂದು ಹೇಳಲಾಗಿದೆ. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೊತ್ತನೂರು ಪೊಲೀಸರು, ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನೋಟು ಎಕ್ಸ್ ಚೇಂಜ್ ದಂಧೆ ಬೆಳಕಿಗೆ ಬಂದಿದೆ.
Advertisement
ಇಷ್ಟು ದೊಡ್ಡ ಪ್ರಮಾಣದ ಹಳೇ ನೋಟುಗಳನ್ನ ಎಲ್ಲಿಂದ ತಂದಿದ್ದಾರೆ ಮತ್ತು ಯಾರಿಗೆ ಸೇರಿದ್ದು ಎಂಬುದನ್ನ ಪೊಲೀಸರು ಪತ್ತೆ ಹಚ್ಚಲು ಮುಂದಾಗಿದ್ದಾರೆ.