ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೆರೆ ಹಿಡಿದ ಫೋಟೋಗಳ ಮಾರಾಟದಿಂದ 3 ಲಕ್ಷಕ್ಕೂ ಅಧಿಕ ರೂ. ಸಂಗ್ರಹವಾಗಿದೆ.
ಮಾರ್ಚ್ 3ರಂದು ವಿಶ್ವ ವನ್ಯಜೀವಿ ದಿನದ ಹಿನ್ನೆಲೆಯಲ್ಲಿ ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‍ನಲ್ಲಿ ದರ್ಶನ್ ಅವರು ಸೆರೆ ಹಿಡಿದ 75 ಆಯ್ದ ಛಾಯಾಚಿತ್ರಗಳನ್ನು ಮೂರು ದಿನಗಳ ಕಾಲ ಪ್ರದರ್ಶನಕ್ಕೆ ಇಡಲಾಗಿತ್ತು. ಮೂರು ದಿನಗಳಲ್ಲಿ ಒಟ್ಟು 3.75 ಲಕ್ಷ ರೂ. ಹಣ ಸಂಗ್ರಹವಾಗಿದೆ.
Advertisement
Advertisement
ತಮ್ಮ ಚಿತ್ರಗಳ ಪ್ರದರ್ಶನದ ಜೊತೆಗೆ ಮಾರಾಟದ ಆಯೋಜನೆ ಕೂಡ ನಡೆದಿತ್ತು. ಪ್ರತಿ ಚಿತ್ರಕ್ಕೆ 2 ಸಾವಿರ ರೂ. ಬೆಲೆ ನಿಗದಿ ಆಗಿತ್ತು. ಅಲ್ಲದೇ ಫೋಟೋ ಜೊತೆಗೆ ದರ್ಶನ್ ಆಟೋಗ್ರಾಫ್ ಪಡೆಯಲು 500 ಹೆಚ್ಚುವರಿ ಹಣ ನೀಡಬೇಕಾಗಿತ್ತು. ಮೂರು ದಿನಗಳು ಪ್ರದರ್ಶನ ನಡೆದ ಜಾಗದಲ್ಲಿ ದರ್ಶನ್ ಆಟೋಗ್ರಾಫ್ ನೀಡಿದ್ದಾರೆ.
Advertisement
Advertisement
ಮಾರ್ಚ್ 1ರಂದು ದರ್ಶನ್ ಹಾಗೂ ಸಂದೇಶ್ ನಾಗರಾಜ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಇದಾದ ಬಳಿಕ ಛಾಯಾಚಿತ್ರದ ಪ್ರದರ್ಶನದ ಬಗ್ಗೆ ಮಾತನಾಡಿದ ದರ್ಶನ್, ಒಂದು ಒಳ್ಳೆಯ ಉದ್ದೇಶದಿಂದ ಈ ಪ್ರದರ್ಶನವನ್ನು ಆಯೋಜಿಸಿದ್ದೇವೆ. ಇದರಲ್ಲಿ ಬಂದ ಹಣವನ್ನು ಅರಣ್ಯ ಸಂರಕ್ಷಣೆಗೆ ಖರ್ಚು ಮಾಡುತ್ತೇನೆ ಎಂದು ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv